ಉಡುಪಿ: ಕೊರೋನಾದಿಂದ ಭಾರೀ ಬೆಲೆ ಕುಸಿತ ಕಂಡಿದ್ದ ಉಡುಪಿಯ ಶಂಕರಪುರ ಮಲ್ಲಿಗೆ ದರ ಮತ್ತೆ ಏರಿಕೆ ಕಂಡಿದೆ.ಇವತ್ತು ಹೂವುಗಳ ರಾಜ ಎನಿಸಿರುವ ಮಲ್ಲಿಗೆ ಮಾರುಕಟ್ಟೆಯಲ್ಲಿ ಅಟ್ಟೆಗೆ 800 ರೂಪಾಯಿಗೆ ಮಾರಾಟವಾಗುತ್ತಿದೆ. ಉಡುಪಿ ಜಿಲ್ಲೆಯ ಶಂಕರಪುರದಲ್ಲಿ ಬೆಳೆಯುವ ಈ ಮಲ್ಲಿಗೆ ಹೂವು ಪೇಟೆಂಟ್ ಪಡೆದ ಕರಾವಳಿಯ ಮಲ್ಲಿಗೆ ಹೂವಾಗಿದ್ದು, ದೇಶ ವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಮದುವೆ ಇನ್ನಿತರ ಸಮಾರಂಭಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಶಂಕರಪುರ ಮಲ್ಲಿಗೆ ಶುಭ ಸಮಾರಂಭಗಳು ಹೆಚ್ಚಾದಂತೆ, 1500 ಸಾವಿರದಿಂದ 2000 ಕ್ಕೂ ಬೇಡಿಕೆ ಇರುತ್ತದೆ. ಮಲ್ಲಿಗೆ ಬೆಲೆ ಏರಿಕೆಯಿಂದಾಗಿ ಮಲ್ಲಿಗೆ ಬೆಳೆಗಾರರು ಸಂತಸಗೊಂಡಿದ್ದಾರೆ.ಅಂದಹಾಗೆ ಮುಂದಿನ ವಾರದಿಂದ ಸಾಲು ಸಾಲು ಹಬ್ಬಗಳು ಬರುವುದರಿಂದ ಮಲ್ಲಿಗೆ ಬೆಲೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಲ್ಲಿ ಬೆಳೆಗಾರರು ಮತ್ತು ಮಾರಾಟಗಾರರಿದ್ದಾರೆ.
Kshetra Samachara
26/08/2021 03:40 pm