ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಿದೇಶಿ ಉದ್ಯೋಗಕ್ಕೆ ಬಾಯ್ ಬಾಯ್ ಹೇಳಿ ಕೃಷಿಯಲ್ಲಿ ಯಶಸ್ಸು ಸಾಧಿಸಿದ ಇಗ್ನೇಷಿಯಸ್ ಲೋಬೊ

ಮಂಗಳೂರು: ಕೈತುಂಬಾ ಸಂಬಳ ಪಡೆಯುವ ವಿದೇಶಿ ನೌಕರಿ. ಇನ್ನೊಂದೆಡೆ ಕೃಷಿಯ ಸೆಳೆತ. ಕೊನೆಗೆ ಆರಿಸಿದ್ದು, ಕೃಷಿಯನ್ನು‌. ಇದಕ್ಕಾಗಿ 15 ವರ್ಷಗಳ ಕಾಲ ದುಡಿದ ದುಬೈ ನೌಕರಿಗೆ ತಿಲಾಂಜಲಿಯಿರಿಸಿ ತಾಯ್ನಾಡಿಗೆ ಮರಳಿಯೇ ಬಿಟ್ಟ ಇವರೀಗ ಯಶಸ್ವೀ ಕೃಷಿ ಸಾಧಕ. ಹಾಗಾದರೆ ಈ ಕೃಷಿ ಸಾಧಕನ ಯಶೋಗಾಥೆಯ ಕಥೆ ಏನೆಂದು ತಿಳಿಯಬೇಕೆ?, ಈ ವಿಶೇಷ ಸುದ್ದಿ ನೋಡಿ.

ಮೂಡುಬಿದಿರೆ ತಾಲೂಕಿನ ತಾಕೋಡೆ ಎಂಬಲ್ಲಿನ ಇಗ್ನೇಷಿಯಸ್ ಲೋಬೊ ಅವರೇ ಯಶಸ್ವೀ ಕೃಷಿ ಸಾಧಕ.‌ ಇವರು ತಮ್ಮ 7.50 ಎಕರೆ ಜಾಗದಲ್ಲಿ ಭತ್ತ, ಅಡಿಕೆ, ತೆಂಗು, ಬಾಳೆ, ವಿವಿಧ ಹಣ್ಣುಗಳು, ತರಕಾರಿಗಳು, ಕರಿಮೆಣಸು, ಗೇರುಬೇಜ ಇತ್ಯಾದಿ ಬೆಳೆಗಳನ್ನು ಬೆಳೆಸಿ ಮಾದರಿ ಕೃಷಿಕರಾಗಿದ್ದಾರೆ‌. ಜೊತೆಗೊಬ್ಬ ಸಹಾಯಕ ಕೂಲಿಯಾಳು ಹಾಗೂ ಕುಟುಂಬಿಕರ ಸಹಕಾರದೊಂದಿಗೆ ಕೇವಲ ತಮ್ಮ ಶ್ರಮದಿಂದ 7.50 ಎಕರೆ ಜಾಗದಲ್ಲಿ ಬಂಗಾರದ ಬೆಳೆಯನ್ನು ಬೆಳೆದಿದ್ದಾರೆ. ಇಂದು ಇವರ ತೋಟ-ಗದ್ದೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

ಸುಮಾರು ಹದಿನೈದು ವರ್ಷಗಳ ಕಾಲ ದುಬೈನಲ್ಲಿ ಕೈತುಂಬಾ ಸಂಬಳ ಪಡೆಯುವ ಉದ್ಯೋಗದಲ್ಲಿದ್ದ ಇಗ್ನೇಷಿಯಸ್ ಲೋಬೊ ಅವರು ತಂದೆಯ ಮೃತಪಟ್ಟ ಬಳಿಕ ಮರಳಿ ತಾಯ್ನಾಡಿನಲ್ಲಿ ಬದುಕುವ ಪ್ರೇರೇಪಣೆ ನೀಡಿತು. ಅಲ್ಲಿಂದ ಭಾರತಕ್ಕೆ ಮರಳಿದ ಅವರು ಮೂಡುಬಿದಿರೆಯಲ್ಲಿನ ತಾಕೋಡೆಯ ತಮ್ಮ ಜಮೀನಿನಲ್ಲಿ ಕೃಷಿಯಲ್ಲಿ ತೊಡಗಿಯೇ ಬಿಟ್ಟರು. ತಮ್ಮ ಮನೆಯ ಖರ್ಚಿಗೆ ಇರಿಸಿ ಉಳಿದ ಅಕ್ಕಿ, ತೆಂಗಿನಕಾಯಿ, ತರಕಾರಿ, ಹಣ್ಣು-ಹಂಪಲುಗಳು, ಕರಿಮೆಣಸು, ಬಾಳೆ ಎಲ್ಲವನ್ನೂ ಮಾರಾಟ ಮಾಡುತ್ತಾರೆ. ಅಲ್ಲದೆ ಶೇ.25 ರಷ್ಟು ಭತ್ತ, ಹಣ್ಣು ಹಂಪಲು, ತರಕಾರಿಗಳು, ಹೂಗಳು ಇನ್ನಿತರ ಪ್ರಾಣಿ-ಪಕ್ಷಿಗಳ ಪಾಲಾಗುತ್ತವೆ. ಇದರಿಂದ ಇವರ ಮನೆಯ ಸುತ್ತಲೂ ವೈವಿಧ್ಯಮಯ ಪಕ್ಷಿಗಳು, ಚಿಟ್ಟೆಗಳು, ಪ್ರಾಣಿಗಳು ಸುಳಿದಾಡುತ್ತಿರುತ್ತವಂತೆ.

ಕೃಷಿಗೆ ಬೇಕಾದ ನೀರಿಗಾಗಿ ಇವರ ತೋಟದಲ್ಲಿ ಎರಡು ಬೃಹದಾಕಾರದ ತೆರೆದ ಬಾವಿಗಳು, ಎರಡು ಬೋರ್ ವೆಲ್ ಗಳು ಇದ್ದು, ಜೊತೆಗೆ ಇಂಗು ಗುಂಡಿಗಳನ್ನು ತೆರೆದಿದ್ದಾರೆ‌. ಇದರಿಂದ ಸಾಕಷ್ಟು ನೀರು ಬೇಸಿಗೆ ಕಾಲದಲ್ಲೂ ಲಭ್ಯವಿರುತ್ತದೆ‌. ಸಂಪೂರ್ಣ ಸಾವಯವ ಮಾದರಿಯಲ್ಲಿ ಕೃಷಿ ಮಾಡುತ್ತಿದ್ದು, ಗೊಬ್ಬರಕ್ಕಾಗಿ ಹಟ್ಟಿ ಗೊಬ್ಬರ, ಸುಡುಮಣ್ಣು ಹಾಗೂ ಕೃಷಿ ಇಲಾಖೆಯಿಂದ ಸಾವಯವ ಗೊಬ್ಬರಗಳನ್ನು ಹಾಕುತ್ತಾರಂತೆ.

ಕೃಷಿಯಲ್ಲಿ ಸಂಪೂರ್ಣ ತೊಡಗಿಸಿರುವ ಇಗ್ನೀಷಿಯಸ್ ಲೋಬೊ ಅವರು ತಮ್ಮ ಸ್ವಂತ ಪರಿಶ್ರಮದಿಂದ ಸಾಕಷ್ಟು ಲಾಭ ಗಳಿಸುತ್ತಿದ್ದಾರೆ. ತಮ್ಮ ಏಳುವರೆ ಎಕರೆಯಲ್ಲಿ ಮಿಶ್ರ ಬೆಳೆ ಬೆಳೆದು ಮಾದರಿ ಕೃಷಿಕರಾಗಿ, ಯುವ ಕೃಷಿಕರಿಗೆ ಪ್ರೇರಣೆಯಾಗಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

09/01/2021 09:40 pm

Cinque Terre

24.02 K

Cinque Terre

4

ಸಂಬಂಧಿತ ಸುದ್ದಿ