ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಸ್ತಾ ರೋಕೋ ಬೇಧಿಸಲು ಮುಂದಾದ ಕಾರು; ವಾಪಾಸ್ ಕಳುಹಿಸಿದ ಮಹಿಳಾ ಹೋರಾಟಗಾರರು!

ಮಂಗಳೂರು: ರೈತರ ರಾಷ್ಟ್ರವ್ಯಾಪಿ ಬಂದ್ ಬೆಂಬಲಿಸಿ ನಗರದ ನಂತೂರು ಜಂಕ್ಷನ್ ನಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ರಾಸ್ತಾ ರೋಕೋ ನಡೆಯಿತು. ಈ ಸಂದರ್ಭ ರಸ್ತೆ ತಡೆ ಬೇಧಿಸಿ ಮುನ್ನುಗ್ಗಲು ಮುಂದಾದ ಕಾರು ಹಾಗೂ ದ್ವಿಚಕ್ರ ವಾಹನವೊಂದನ್ನ ಮಹಿಳಾ ಪ್ರತಿಭಟನಾಕಾರರು ತಡೆದು ನಿಲ್ಲಿಸಿ ವಾಪಾಸ್ ಕಳುಹಿಸಿದ್ದು ಗಮನ ಸೆಳೆಯಿತು. ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸುತ್ತಿದ್ದ ವೇಳೆ ಆಗಮಿಸಿದ ಕಾರು, ದ್ವಿಚಕ್ರ ವಾಹನವನ್ನ ತಡೆದು ನಿಲ್ಲಿಸಿ ಮಹಿಳಾ ಹೋರಾಟಗಾರರು ತರಾಟೆಗೆ ತೆಗೆದುಕೊಳ್ಳುತ್ತಲೇ ಪೊಲೀಸರು ಮಧ್ಯಪ್ರವೇಶಿಸಿ ವಾಹನಗಳನ್ನ ವಾಪಾಸ್ ಕಳುಹಿಸಿರು.

Edited By : Manjunath H D
Kshetra Samachara

Kshetra Samachara

08/12/2020 12:54 pm

Cinque Terre

24.77 K

Cinque Terre

10

ಸಂಬಂಧಿತ ಸುದ್ದಿ