ಉಳ್ಳಾಲ: ರಸ್ತೆ ಅಪಘಾತವೊಂದರಲ್ಲಿ ಬೈಕ್ ಒಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು,ಸಹ ಸವಾರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ ಘಟನೆ ರಾ.ಹೆ 66 ರ ಜಪ್ಪಿನ ಮೊಗರು ಮಹಾಕಾಳಿ ಪಡ್ಪು ಕ್ರಾಸ್ ಬಲಿ ಇಂದು ಮುಂಜಾನೆ ನಸುಕಿನ ವೇಳೆ ನಡೆದಿದೆ.
ತೊಕ್ಕೊಟ್ಟು ,ಅಂಬಿಕಾರೋಡ್ನ ವೈನ್ & ಡೈನ್ ಬಾರ್ನ ಮ್ಯಾನೇಜರ್ ಚಿಕ್ಕಮಂಗಳೂರು ಜಿಲ್ಲೆ,ಹರಣೆ ನಿವಾಸಿ ಪ್ರತಾಪ್ ಶೆಟ್ಟಿ (27) ಮೃತ ಯುವಕ. ಪ್ರತಾಪ್ ಅವರ ಚಿಕ್ಕಮ್ಮನ ಮಗ ವೈನ್ & ಡೈನ್ ಬಾರ್ನ ಕೌಂಟರ್ ಬಾಯ್ ಚಿಕ್ಕಮಂಗಳೂರು ಜಿಲ್ಲೆಯ ಕಿಗ್ಗ ನಿವಾಸಿ ಅಭಿ ಶೆಟ್ಟಿ(22)ಗಂಭೀರ ಸ್ಥಿತಿಯಲ್ಲಿ ನಗರದ ಇಂಡಿಯಾನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರತಾಪ್ ಮತ್ತು ಅಭಿ ಇಂದು ಮುಂಜಾನೆ 2 ಗಂಟೆಗೆ ಕೆಲಸ ಮುಗಿಸಿ ಫರಂಗಿ ಪೇಟೆಯ ಮಧ್ಯ ಪ್ರದೇಶ್ ಬಾರ್ ಕಡೆಗೆ ಬೈಕಲ್ಲಿ ಹೊರಟಿದ್ದರು.ಪ್ರತಾಪ್ ಅವರ ಅಣ್ಣ ಮಧ್ಯ ಪ್ರದೇಶ್ ಬಾರಲ್ಲಿ ಮ್ಯಾನೇಜರ್ ಆಗಿದ್ದು ಅವರ ಕೊಠಡಿಗೆ ಇಬ್ಬರೂ ಹೊರಟಿದ್ದರು.ಜಪ್ಪಿನ ಮೊಗರು ಮಹಾಕಾಳಿ ಪಡ್ಪು ಕ್ರಾಸ್ ಬಳಿ ವೇಗದಲ್ಲಿದ್ದ ಬೈಕ್ ಸ್ಕಿಡ್ ಆಗಿ ಬಿದ್ದಿದೆ.ಬೈಕ್ ಬಿದ್ದ ರಭಸಕ್ಕೆ ಸವಾರರಿಬ್ಬರು 50 ಮೀಟರ್ ನಷ್ಟು ದೂರ ಎಸೆಯಲ್ಪಟ್ಟಿದ್ದು ಸವಾರ ಪ್ರತಾಪ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಸಹ ಸವಾರ ಅಭಿ ಸ್ಥಿತಿನೂ ಚಿಂತಾಜನಕವಾಗಿದ್ದು ಆತನನ್ನ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಆಸ್ಪತ್ರೆಗೆ ಸೇರಿಸಿ ಪ್ರಕರಣ ದಾಖಲಿಸಿದ್ದಾರೆ.
Kshetra Samachara
19/09/2022 10:10 am