ಉಳ್ಳಾಲ: ರಾಂಗ್ ಸೈಡಲ್ಲಿ ಬಂದ ಬೈಕಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಮತ್ತು ಬೈಕ್ ಕಮರಿಗೆ ಉರುಳಿ ಬಿದ್ದಿದ್ದು, ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ರಾ.ಹೆ 66ರ ತೊಕ್ಕೊಟ್ಟು ಸಮೀಪದ ಕಾಫಿಕಾಡು ಎಂಬಲ್ಲಿ ನಡೆದಿದೆ.
ಮಧ್ಯಾಹ್ನದ ವೇಳೆಗೆ ಮಂಜನಾಡಿ ನಿವಾಸಿಗಳಾದ ಮರ ಕಡಿಯುವ ಕೂಲಿ ಕಾರ್ಮಿಕರಿಬ್ಬರು ಓವರ್ ಬ್ರಿಡ್ಜ್ ನಿಂದ ಕಾಫಿಕಾಡಿಗೆ ಹೆದ್ದಾರಿಯಲ್ಲಿ ರಾಂಗ್ ಸೈಡಲ್ಲಿ ಸಂಚರಿಸುತ್ತಿದ್ದ, ವೇಳೆ ಕುಂಪಲದಿಂದ ಉಳ್ಳಾಲಕ್ಕೆ ತೆರಳುತ್ತಿದ್ದ ವ್ಯಾಗನಾರ್ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಹೆದ್ದಾರಿ ಬದಿಯ ಆಳವಾದ ಕಮರಿಗೆ ಉರುಳಿಬಿದ್ದರೆ ಕಾರು ಕಮರಿನ ಅಂಚಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ.
ಸ್ಥಳೀಯರು ತಕ್ಷಣ ಕಾರು ಮತ್ತು ಬೈಕ್ ಸವಾರರನ್ನ ಮೇಲಕ್ಕೆತ್ತಿದ್ದಾರೆ. ಕಾರು ಸವಾರರಾದ ಕುಂಪಲ ನಿವಾಸಿ ಸಂದೀಪ್ ಅವರು ಅಪಾಯದಿಂದ ಪಾರಾಗಿದ್ದರೆ. ಗಂಭೀರ ಗಾಯಗೊಂಡ ಬೈಕ್ ಸವಾರರಿಬ್ಬರನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ತೊಕ್ಕೊಟ್ಟುವಿನ ಹೆದ್ದಾರಿ ಅವೈಜ್ನಾನಿಕವಾಗಿದ್ದು, ಸಂಬಂಧಪಟ್ಟ ನವಯುಗ ಕಂಪನಿ ವಾಹನಸವಾರರಿಂದ ಟೋಲ್ ವಸೂಲಿ ಮಾಡುತ್ತಿದ್ದರೂ ಇದುವರೆಗೂ ಸಮರ್ಪಕ ಸರ್ವಿಸ್ ರಸ್ತೆಗಳನ್ನೇ ನಿರ್ಮಿಸಿಲ್ಲ. ಪರಿಣಾಮ ವಾಹನ ಸವಾರರು ಸಮಯ, ಇಂಧನ ಉಳಿಸೋ ಭರದಲ್ಲಿ ರಾಂಗ್ ಸೈಡ್ ಚಲಿಸುವದರಿಂದ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ.
Kshetra Samachara
10/08/2022 07:53 pm