ಬೈಂದೂರು: ತಾಕೂಕಿನ ಶಿರೂರು ಟೋಲ್ ಗೇಟ್ ನಲ್ಲಿ ಸಂಭವಿಸಿದ ಅಪಘಾತಕ್ಕೆ ಸಂಬಂಧಿಸಿದಂತೆ ಆ್ಯಂಬುಲೆನ್ಸ್ ಚಾಲಕ ರೋಶನ್ ಅವರನ್ನು ಬೈಂದೂರು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕುಡಿದು ವಾಹನ ಚಲಾಯಿಸಿದ್ದಾನೆ ಎಂಬ ಆರೋಪದಡಿ ಚಾಲಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ವೈದ್ಯಕೀಯ ಪರೀಕ್ಷೆ ನಡೆಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
ಈ ಮಧ್ಯೆ ತಮ್ಮ ನಿರ್ಲಕ್ಷ್ಯತನ ಮರೆ ಮಾಚಲು ಪ್ರಕರಣವನ್ನುಆ್ಯಂಬುಲೆನ್ಸ್ ಚಾಲಕನ ತಲೆಗೆ ಕಟ್ಟಲು ಟೋಲ್‌ನವರು ಸಂಚು ನಡೆಸಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.
ದೊಡ್ಡ ದುರಂತಕ್ಕೆ ಸಾಕ್ಷಿಯಾಗಿರುವ ಟೋಲ್‌ಗೇಟ್‌ನ ಸಿಬ್ಬಂದಿಯ ನಿರ್ಲಕ್ಷ್ಯತನ, ಟೋಲ್‌ನ ಲೇನ್‌ನಲ್ಲಿ ಮಲಗಿರುವ ದನ ಎಬ್ಬಿಸದೆ ಇರುವುದು, ತುರ್ತುಗೇಟ್‌ನ ಬ್ಯಾರಿಕೇಡ್‌ನ್ನು ಆ್ಯಂಬುಲೆನ್ಸ್ ಬರುವಾಗ ತೆಗೆಯುವುದು - ಈ ಎಲ್ಲ ಅಂಶಗಳನ್ನು ವಿಚಾರಣೆ ನಡೆಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
Kshetra Samachara
23/07/2022 11:28 am