ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಗೊಂದಲಗಳಿಗೆ ತೆರೆ: ಕಾರು ಪಲ್ಟಿಯಾಗಿ ನಾಪತ್ತೆಯಾದವರ ಮೃತದೇಹಗಳು ಪತ್ತೆ

ಸುಳ್ಯ: ಸೇತುವೆಗೆ ಡಿಕ್ಕಿ ಹೊಡೆದ ಕಾರು ಹೊಳೆಗೆ ಉರುಳಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮೂರನೇ ದಿನವೂ ಮುಂದುವರೆದಿದ್ದು ನಾಪತ್ತೆಯಾದವರಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದೆ.

ಕಾರು ಬಿದ್ದ ಜಾಗದಿಂದ ಕೆಳಗಡೆ ಸುಮಾರು 250 ಮೀ ದೂರದಲ್ಲಿ ಎರಡು ಮೃತದೇಹಗಳು ಪತ್ತೆಯಾಗಿದೆ. ಸ್ಥಳೀಯರು ಮೊದಲು ಮೃತದೇಹಗಳನ್ನು ನೋಡಿದ್ದು, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಬೈತಡ್ಕ ಸೇತುವೆಯಿಂದ 250 ಮೀಟರ್ ದೂರದ ಮರಕ್ಕಡ ಜೇಡರಕೇರಿ ಮಂಜಯ್ಯ ಆಚಾರ್ಯ ಎಂಬವರ ಮನೆಯ ಬಳಿ ಹೊಳೆಯಲ್ಲಿ ಮೃತದೇಹ ಒಂದು ಪತ್ತೆಯಾಗಿತ್ತು. ನಂತರದಲ್ಲಿ ಎರಡನೇ ಮೃತದೇಹ ಪತ್ತೆಯಾಗಿದೆ.

ಜುಲೈ 10 ರಂದು ಬೈತಡ್ಕ ಮಸೀದಿ ಬಳಿ ಮಾರುತಿ 800 ಕಾರು ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದಿತ್ತು. ಮೃತದೇಹಗಳನ್ನು ಕಾರು ಚಾಲಕ ಧನಂಜಯ 26 ವರ್ಷ ಪ್ರಾಯ, ಸಹ ಪ್ರಯಾಣಿಕ ಧನುಷ್ 21 ವರ್ಷ ಎಂದು ಗುರುತಿಸಲಾಗಿದೆ.

Edited By :
PublicNext

PublicNext

12/07/2022 11:15 am

Cinque Terre

23.97 K

Cinque Terre

0

ಸಂಬಂಧಿತ ಸುದ್ದಿ