ಮಂಗಳೂರು: ಕ್ರಿಕೆಟ್ ಬಾಲ್ ತೆಗೆಯಲು ಹೋಗಿ ನಗರದ ಕೊಟ್ಟಾರ ಚೌಕಿಯಲ್ಲಿರುವ ಹಾಸ್ಟೆಲ್ ನ ನಾಲ್ಕನೇ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿಯೋರ್ವನು ಮೃತಪಟ್ಟ ಘಟನೆ ನಡೆದಿದೆ.
ಬಿಜಾಪುರ ಮೂಲದ, ಚೈತನ್ಯ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಣವ್ ಎಸ್.ಮುಂಡಾಸ(18) ಮೃತಪಟ್ಟ ವಿದ್ಯಾರ್ಥಿ.ಚೈತನ್ಯ ಕಾಲೇಜಿನಲ್ಲಿ ವಾಸ್ತವ್ಯವಿದ್ದ ವಿದ್ಯಾರ್ಥಿ ಪ್ರಣವ್ ಎಸ್.ಮುಂಡಾಸ ಹಾಸ್ಟೆಲ್ ನಲ್ಲಿ ಕೆಲ ಮಕ್ಕಳೊಂದಿಗೆ ಕ್ರಿಕೆಟ್ ಆಡುತ್ತಿದ್ದ ಎನ್ನಲಾಗಿದೆ.
ಈ ವೇಳೆ ಕ್ರಿಕೆಟ್ ಬಾಲ್ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದಿದೆ. ಕ್ರಿಕೆಟ್ ಬಾಲ್ ಹೆಕ್ಕಲು ಹಾಸ್ಟೆಲ್ ಕಟ್ಟಡದ ತಗಡು ಶೀಟ್ ಮೇಲೆ ಪ್ರಣವ್ ಹತ್ತಿದ್ದಾನೆ. ಈ ಸಂದರ್ಭ ಜಾರಿ ಬಿದ್ದ ಆತ ಗಂಭೀರವಾಗಿ ಗಾಯಗೊಂಡಿದ್ದನು. ತಕ್ಷಣ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಣವ್ ಮೃತಪಟ್ಟಿದ್ದಾನೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
04/05/2022 08:58 pm