ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು : ಮಲ್ಲಾರು ಪಕೀರಣಕಟ್ಟೆಯಲ್ಲಿ ಗುಜಿರಿ ಅಂಗಡಿ ಸ್ಪೋಟ, ಇಬ್ಬರ ಸಜೀವ ದಹನ...!

ಕಾಪು : ತಾಲೂಕಿನ‌ ಮಲ್ಲಾರು ಪಕೀರಣಕಟ್ಟೆಯಲ್ಲಿ ಗುಜಿರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ

ಇಬ್ಬರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳೀಯರ ಪ್ರಕಾರ ಗುಜಿರಿ ಅಂಗಡಿಯೊಳಗೆ ಐದು ಮಂದಿ ಇದ್ದು,ಉಡುಪಿ ಅಗ್ನಿಶಾಮಕ ದಳ, ಅದಾನಿ - ಯುಪಿಸಿಎಲ್ ಅಗ್ನಿಶಾಮಕ‌ವಾಹನ, ಐ.ಎಸ್.ಪಿ.ಆರ್.ಎಲ್ ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸುವ ಕೆಲಸ ನಡೆಯುತ್ತಿದೆ.

ಬೆಂಕಿಯ ಕೆನ್ನಾಲಗೆ ಎಲ್ಲೆಡೆ ಹಬ್ಬುತ್ತಿದ್ದು ಸುತ್ತಮುತ್ತಲಿನ ಮನೆ‌, ವಸತಿ ಸಮುಚ್ಚಯ, ಮಸೀದಿಗೂ ಹಾನಿಯುಂಟಾಗುವ ಬೀತಿ ಎದುರಾಗಿದೆ.

ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದು, ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ.

ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Edited By : Shivu K
Kshetra Samachara

Kshetra Samachara

21/03/2022 12:08 pm

Cinque Terre

14.51 K

Cinque Terre

0

ಸಂಬಂಧಿತ ಸುದ್ದಿ