ಮೂಡುಬಿದಿರೆ: ಕಿನ್ನಿಗೋಳಿ ಮೂಡಬಿದ್ರೆ ರಾಜ್ಯ ಹೆದ್ದಾರಿಯ ಕಲ್ಲಮುಂಡ್ಕೂರು ಪೇಟೆಯ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಯನ್ನು ಮೂಡಬಿದ್ರೆ ಸಮೀಪದ ಸಂಪಿಗೆಯ ಇಡ್ಡಬೆಟ್ಟು ನಿವಾಸಿ ಹರೀಶ್ (50) ಎಂದು ಗುರುತಿಸಲಾಗಿದೆ.
ಮೃತ ಹರೀಶ್ ಸಂಜೆ ಸಂಪಿಗೆಯಿಂದ ಕಲ್ಲಮುಂಡ್ಕೂರು ಪೇಟೆಗೆ ಹೋಗಿದ್ದು, ಅನಂತರ ಹಿಂದಿರುಗಿ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ.
ಅಪಘಾತದಿಂದ ಗಂಭೀರ ಗಾಯಗೊಂಡು ನೆಲಕ್ಕೆ ಬಿದ್ದ ಹರೀಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೂಡುಬಿದಿರೆ ಪೊಲೀಸ್ ಉಪ ನಿರೀಕ್ಷಕ ಸುದೀಪ್ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಹರೀಶ್ ತೋಟದ ಕೆಲಸಗಾರರ ಮೇಸ್ತ್ರಿ ವೃತ್ತಿ ನಡೆಸುತ್ತಿದ್ದರು. ಅವರ ಪತ್ನಿ ಕಲ್ಲಮುಂಡ್ಕೂರು ಪೇಟೆ ಯಲ್ಲಿರುವ ಗೇರುಬೀಜ ಸಂಸ್ಕರಣ ಉದ್ಯಮದಲ್ಲಿ ಕಾರ್ಮಿಕರಾಗಿದ್ದು, ಪುತ್ರ ಕಟೀಲು ಕಾಲೇಜಿನಲ್ಲಿ ಪ್ರಥಮ ಪದವಿಯಲ್ಲಿ ಓದುತ್ತಿದ್ದಾರೆ. ಪುತ್ರಿ ಎಂಟನೇ ತರಗತಿಯಲ್ಲಿದ್ದಾಳೆ.
Kshetra Samachara
24/01/2022 12:29 pm