ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ.ಅಡ್ಕಾರಿನಲ್ಲಿ ಅಪಘಾತ : ಪಾದಾಚಾರಿ ಮೃತ್ಯು

ಸುಳ್ಯ: ಜನವರಿ 20 ರಂದು ಸುಳ್ಯದ ಕನಕಮಜಲು ಬಳಿ ಪ್ರತ್ಯೇಕ ಎರಡು ಅಪಘಾತದ ಘಟನೆಗಳು ನಡೆದಿದ್ದವು. ಘಟನೆಯಲ್ಲಿ ಪ್ರಯಾಣಿಕರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದವು. ಆದರೆ ಇಂದು ಇದೇ ಜಾಗದಲ್ಲಿಯೇ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಪಿಕಪ್ ವಾಹನ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ.

ಸುಳ್ಯ ಪೈಚಾರಿನ ನವೀನ್ ಕುಮಾರ್ (60) ಮೃತಪಟ್ಟ ವ್ಯಕ್ತಿ.

ಅಡ್ಕಾರಿನಲ್ಲಿ ರೇಷನ್ ಪಡೆಯಲು ತೆರಳಿದ್ದ ವ್ಯಕ್ತಿ ಬಸ್ ಇಳಿದು ರಸ್ತೆ ದಾಟುತ್ತಿದ್ದ ವೇಳೆ, ಆ ರಸ್ತೆಯಾಗಿ ಬಂದ ಪಿಕಪ್ ವಾಹನ ಡಿಕ್ಕಿಯಾಯಿತು. ಪರಿಣಾಮ ನವೀನ್ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡರು. ಪಿಕಪ್ ನವರೇ ತಕ್ಷಣ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರಾದರೂ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

Edited By :
Kshetra Samachara

Kshetra Samachara

21/01/2022 08:09 pm

Cinque Terre

6.4 K

Cinque Terre

0

ಸಂಬಂಧಿತ ಸುದ್ದಿ