ಮಂಗಳೂರು: ಈತನಿಗೆ ಸರಿಯಾಗಿ ಸ್ಕೂಟರ್ ಸವಾರಿ ಗೊತ್ತಿಲ್ಲವೋ? ಅಥವಾ ಸರಿಯಾಗಿ ಗೊತ್ತಿದ್ದೂ, ಸ್ಟಂಟ್ ಗಾಗಿಯೇ ಈ ʼಹುಚ್ಚಾಟʼ ಮಾಡುತ್ತಿದ್ದಾನೆಯೇ? ಎಂಬ ಅನುಮಾನ ಈ ವೀಡಿಯೊ ನೋಡಿದ ಬಳಿಕ ನಮ್ಮಲ್ಲಿ ಮೂಡುತ್ತವೆ!.
ಹೌದು, ಆ ಸಮಯ ಸಂಭವನೀಯ ಅಪಾಯ ತಪ್ಪಿದರೆ ನೂರು ವರ್ಷ ಆಯುಸ್ಸು ಎನ್ನುವಂತೆ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಎಲಿಯಾರುಪದವು ಎಂಬಲ್ಲಿ ಅತಿವೇಗದಿಂದ ದೌಡಾಯಿಸಿದ ಸ್ಕೂಟರ್ ಸವಾರನೋರ್ವ ತಿರುವು ಪಡೆದುಕೊಳ್ಳುತ್ತಿದ್ದ ಬಸ್ಸನ್ನು ತಪ್ಪಿಸುವ ಧಾವಂತದಲ್ಲಿ ಮರವೊಂದರ ಎಡೆಯಿಂದ ಬಿಲ್ಲಿನಿಂದ ಬಿಟ್ಟ ಬಾಣದಂತೆ ರೊಯ್ಯನೇ ಒಳ ನುಸುಳಿ ಪಾರಾಗುವ ಸ್ಟಂಟ್ ರೀತಿಯ ಮೈ ನವಿರೇಳಿಸುವ ಚಿತ್ರಣ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ನಿನ್ನೆ ಸಂಜೆ ಸಾವಿನೊಂದಿಗೆ ಸರಸ ಎಂಬಂತೆ ಈತನ "ಸ್ಟಂಟಾವಳಿ" ನಡೆದಿದೆ. ಟೋಟಲಿ ಅಂದು ಬೈಕ್ ಸವಾರನ ಅದೃಷ್ಟ ಶೇ.100 ರಷ್ಟು ಚೆನ್ನಾಗಿತ್ತು ಎಂಬುದು ಇಲ್ಲಿ ಸಾಬೀತಾಗಿದೆ. ಅಂತೂ ಈ ʼಲಕ್ಕಿಸ್ಟಾರ್ʼ ಯುವಕ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ. ಈ ವೀಡಿಯೊ ಇದೀಗ ವೈರಲ್ ಆಗುತ್ತಿದೆ.
PublicNext
09/01/2022 09:05 pm