ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಆಟೋ ಚಾಲನೆಯಲ್ಲಿದ್ದಾಗಲೇ ಚಾಲಕ ಹೃದಯಾಘಾತದಿಂದ ಮೃತ್ಯು

ಉಳ್ಳಾಲ: ಆಟೋ ರಿಕ್ಷಾ ಚಾಲನೆಯಲ್ಲಿದ್ದಾಗಲೇ ಚಾಲಕ ಹೃದಯಾಘಾತಕ್ಕೆ ಬಲಿಯಾದ ಘಟನೆ ನಗರದ ನೇತ್ರಾವತಿ ಸೇತುವೆ ಮೇಲೆ ನಡೆದಿದೆ.

ಮೊಹಮ್ಮದ್ ಹನೀಫ್ ಹೃದಯಾಘಾತದಿಂದ ಮೃತಪಟ್ಟವರು. ಮೊಹಮ್ಮದ್ ಹನೀಫ್ ತೊಕ್ಕೊಟ್ಟು ಬಳಿಯ ಕಲ್ಲಾಪುವಿನಲ್ಲಿರುವ ಗ್ಲೋಬಲ್ ಮಾರ್ಕೆಟ್ ಗೆ ತರಕಾರಿ ತರಲೆಂದು ವ್ಯಾಪಾರಿಯೊಬ್ಬರನ್ನು ರಿಕ್ಷಾದಲ್ಲಿ ಮಂಗಳೂರಿಗೆ ಕರೆ ತರುತ್ತಿದ್ದರು. ಜಪ್ಪಿನಮೊಗರು ಬರುವಾಗ ಹೆದ್ದಾರಿಯಲ್ಲೇ ಮೊಹಮ್ಮದ್ ಹನೀಫ್ ಅವರಿಗೆ ಕಣ್ಣು ಮಂಜಾಗಿದ್ದು ರಸ್ತೆ ಮಧ್ಯದಲ್ಲಿರುವ ವಿಭಾಜಕಕ್ಕೆ ಅವರ ರಿಕ್ಷಾ ಡಿಕ್ಕಿ ಹೊಡೆದಿತ್ತು. ಈ ವೇಳೆ ಸಾರ್ವಜನಿಕರು ಅವರಿಗೆ ಶುಶ್ರೂಷೆ ನೀಡಿದ್ದಾರೆ.

ಅಲ್ಲಿಂದ ಸಾವರಿಸಿಕೊಂಡು ಸ್ವಲ್ಪ ಮುಂದೆ ರಿಕ್ಷಾ ಚಲಾಯಿಸಿಕೊಂಡು ಬಂದಿದ್ದಾರೆ. ಆದರೆ ನೇತ್ರಾವತಿ ಸೇತುವೆಯ ಮಧ್ಯೆ ಭಾಗಕ್ಕೆ ಬರುತ್ತಿದ್ದಂತೆ ಆಟೋ ಸ್ಥಗಿತಗೊಂಡಿದ್ದು ಹನೀಫ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

03/12/2021 04:53 pm

Cinque Terre

17.62 K

Cinque Terre

3

ಸಂಬಂಧಿತ ಸುದ್ದಿ