ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕ್ಷೀರಸಾಗರ ಬಳಿ ಭಾರಿ ಮಳೆಗೆ ಕೃತಕ ನೆರೆ ಉಂಟಾಗಿದ್ದು, ಸರಣಿ ಅಪಘಾತ ಸಂಭವಿಸಿದೆ.
ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು ಕ್ಷೀರಸಾಗರದ ಪೆಟ್ರೋಲ್ ಬಂಕ್ ಬಳಿ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದಿದೆ. ಈ ಸಂದರ್ಭ ಕಾರಿನಲ್ಲಿದ್ದವರು ಪವಾಡಸದೃಶ ಪಾರಾಗಿದ್ದಾರೆ.
ಇದೇ ಪರಿಸರದಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು ಹೆದ್ದಾರಿಯಲ್ಲಿ ನಿಂತ ನೀರಿನ ಆಳ ತಿಳಿಯದೆ ಪೆಟ್ರೋಲ್ ಬಂಕ್ ಬಳಿ ಹೆದ್ದಾರಿಯಲ್ಲಿ ಪಲ್ಟಿಯಾಗಿದ್ದು ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಸಂದರ್ಭ ಟ್ರಾಫಿಕ್ ಪೊಲೀಸರು, ಹೆದ್ದಾರಿ ಇಲಾಖೆ ಸಿಬ್ಬಂದಿಗಳು ಭಾರಿ ಮಳೆ ನಡುವೆ ಕಾರನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕ್ಷೀರಸಾಗರದ ಬಳಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿ ಅವ್ಯವಸ್ಥೆಗಳ ಆಗರವಾಗಿದ್ದು, ಮೊಣಕಾಲಿನವರೆಗೆ ಮಳೆ ನೀರು ನಿಂತು ಅಪಾಯದ ಸ್ಥಿತಿ ಎದುರಾಗಿದೆ.
Kshetra Samachara
14/11/2021 09:45 pm