ಬಜಪೆ: ಐದು ದಿನಗಳ ಹಿಂದೆ ಗುರುಪುರ ಸೇತುವೆಯಿಂದ ನದಿಗೆ ಹಾರಿದ್ದ ಸತೀಶ್ ಪೂಜಾರಿ(32) ಎಂಬವರ ಮೃತದೇಹವು ಇಂದು ಪತ್ತೆಯಾಗಿದೆ. ಗುರುಪುರ ನದಿಯ ಮರವೂರು ಡ್ಯಾಮ್ ನಲ್ಲಿ ಮೃತದೇಹ ತೇಲುತ್ತಿದ್ದುದನ್ನು ಕಂಡ ಸ್ಥಳೀಯರು ಈ ಬಗ್ಗೆ ಬಜಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು.ಬಜಪೆ ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ಶವವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಸತೀಶ್ ಪೂಜಾರಿ ಎಂಬವರು ಆ.18 ಸೋಮವಾರದಂದು ಬೆಳಿಗ್ಗೆ ತನ್ನ ಆಕ್ಟಿವಾ ದ್ವಿಚಕ್ರ ವಾಹನವನ್ನು ಗುರುಪುರ ಸೇತುವೆಯ ಸಮೀಪ ನಿಲ್ಲಿಸಿ ನದಿಗೆ ಹಾರಿದ್ದರು.
ಸಕಲೇಶಪುರದವರಾಗಿದ್ದ ಸತೀಶ್ ಪೂಜಾರಿ ಕುಪ್ಪೆಪದವು, ಗಂಜಿಮಠ ಜಂಕ್ಷನ್‍ನಲ್ಲಿ ಫಾಸ್ಟ್ ಫೂಡ್ ಗೂಡಂಗಡಿ ನಡೆಸುತ್ತಿದ್ದರು.ಅಲ್ಲದೆ ಇತ್ತೀಚೆಗೆ ಮಂಗಳೂರಿನಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು.
ಮೊಗರು ಕುಕ್ಕಟ್ಟೆಯ ಯುವತಿಯನ್ನು ಮದುವೆಯಾಗಿದ್ದ ಇವರು ಗಂಜಿಮಠ-ಮಳಲಿ ಕ್ರಾಸ್ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.ನಂತರ ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು . ಕುಟುಂಬದಲ್ಲಿನ ಕಲಹವೇ ಸತೀಶ್ ಆತ್ಮಹತ್ಯೆಗೆ ಕಾರಣ ಎನ್ನಲಾಗಿದ್ದು, ನದಿಗೆ ಹಾರುವ ಮುನ್ನ ತನ್ನ ಸ್ನೇಹಿತರಿಗೆ ವಾಯ್ಸ್ ಮೆಸ್ಸೇಜ್ ನ್ನು ಕಳುಹಿಸಿದ ಬಳಿಕ ನದಿಗೆ ಹಾರಿದ್ದರು.
Kshetra Samachara
22/10/2021 10:10 pm