ಬೈಂದೂರು: ತಾಲೂಕಿನ ಶಿರೂರು ಸಮೀಪದ ಅಳ್ವೆಗದ್ದೆ ಬಳಿ 15ರ ಬಾಲಕನೊಬ್ಬ ಅತಿ ವೇಗದಿಂದ ಬೈಕ್ ಚಲಾಯಿಸಿಕೊಂಡು ಬಂದು ಡಿವೈಡರ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಅರಾನ್ ಮೃತಪಟ್ಟ ದುರ್ದೈವಿ. ಈತ ಹಡವಿನಕೋಣೆ ನಿವಾಸಿಯಾಗಿದ್ದು, ಕಳೆದ ವಾರವಷ್ಟೇ ಬೈಂದೂರು ಪೊಲೀಸರು ಈತ ಚಾಲನೆ ಪರವಾನಿಗೆ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ವೇಳೆ ಪತ್ತೆ ಹಚ್ಚಿ ದಂಡ ಕೂಡ ವಿಧಿಸಿದ್ದರು. ಅಲ್ಲದೆ, ಬೈಕ್ ಸೀಜ್ ಮಾಡಿ ಎರಡು ದಿನ ಠಾಣೆಯಲ್ಲಿರಿಸಿಕೊಂಡಿದ್ದು ಆತನ ತಾಯಿಯನ್ನು ಬರಹೇಳಿ ಬುದ್ಧಿ ಹೇಳಿ ಕಳುಹಿಸಿದ್ದರು.
ಆದರೆ, ಗುರುವಾರ ಮುಂಜಾನೆ ಅತಿ ವೇಗದಿಂದ ಬೈಕ್ ಚಲಾಯಿಸಿ ಡಿವೈಡರ್ ಗೆ ಗುದ್ದಿದ ಅರಾನ್ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬೈಂದೂರು ಠಾಣಾಧಿಕಾರಿ ಸಂಗೀತಾ ಹಾಗೂ ಸಿಬ್ಬಂದಿ ಧಾವಿಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
11/02/2021 04:25 pm