ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕಾರ್ನಾಡ್ ಜಂಕ್ಷನ್ ಬಳಿ ಮುಲ್ಕಿ ತಹಶೀಲ್ದಾರ್ ಪ್ರಯಾಣಿಸುತ್ತಿದ್ದ ಜೀಪ್‌ಗೆ ಲಾರಿ ಡಿಕ್ಕಿಯಾಗಿದೆ. ಅದೃಷ್ಟವಶಾತ್ ತಹಶೀಲ್ದಾರ್ ಅಪಾಯದಿಂದ ಪಾರಾಗಿದ್ದಾರೆ.
ಮಂಗಳೂರಿನಿಂದ ಕಾರ್ನಾಡ್ ಬೈಪಾಸ್ ಮೂಲಕ ಕಾರ್ನಾಡ್‌ನಲ್ಲಿರುವ ಮುಲ್ಕಿ ತಹಶೀಲ್ದಾರ್ ಕಚೇರಿಗೆ ಕರ್ತವ್ಯ ನಿರ್ವಹಿಸಲು ತಹಶೀಲ್ದಾರ್ ಗುರುಪ್ರಸಾದ್ ಸರಕಾರದ ವಾಹನದಲ್ಲಿ ಆಗಮಿಸುತ್ತಿದ್ದರು. ಈ ವೇಳೆ ಕಾರ್ನಾಡ್ ಜಂಕ್ಷನ್ ಬಳಿ ನಿಡ್ಡೋಡಿಯಿಂದ ಉಡುಪಿ ಕಡೆಗೆ ಕೆಂಪು ಕಲ್ಲು ಹೇರಿಕೊಂಡು ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಜೀಪ್ ಎದುರು ಭಾಗ ಜಖಂಗೊಂಡಿದ್ದು, ಜೀಪ್ ಎದುರು ಭಾಗದಲ್ಲಿ ಕುಳಿತಿದ್ದ ತಹಶೀಲ್ದಾರ್ ಗುರುಪ್ರಸಾದ್ ಪವಾಡ ಸದೃಶ ಪಾರಾಗಿದ್ದಾರೆ.
ಅಪಘಾತದಿಂದ ಕೆಲ ಹೊತ್ತು ಮಾತಿನ ಚಕಮಕಿ ನಡೆದು ರಾಜ್ಯ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ತಹಶೀಲ್ದಾರ್ ಬೇರೆ ವಾಹನದಲ್ಲಿ ಪ್ರಯಾಣಿಸಿದ್ದಾರೆ. ಬಳಿಕ ಸ್ಥಳೀಯ ಆಟೋ ಚಾಲಕರು ಮತ್ತಿತರರು ಸೇರಿ ಎರಡು ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ.
PublicNext
03/08/2022 01:59 pm