ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಸಮುದ್ರ ಮಧ್ಯೆ ಮರಳದಿಬ್ಬಕ್ಕೆ ನಾಡದೋಣಿ ಸಿಲುಕಿ ಅಪಾರ ನಷ್ಟ

ಮಂಗಳೂರು : ಕಡಲ ಮೀನುಗಾರಿಕೆಗೆ ತೆರಳಿ ವಾಪಸಾಗುತ್ತಿದ್ದ ನಾಡದೋಣಿಯೊಂದು ಸಮುದ್ರದ ಮಧ್ಯೆ ಮರಳದಿಬ್ಬಕ್ಕೆ ಸಿಲುಕಿ ಅಪಾರ ನಷ್ಟ ಸಂಭವಿಸಿದ ಘಟನೆ ಸರ್ಫಿಂಗ್ ಖ್ಯಾತಿಯ ಸಸಿಹಿತ್ಲು ಮುಂಡಾ ಅಳಿವೆ ಬಳಿ ಶುಕ್ರವಾರ ಸಂಜೆ ನಡೆದಿದೆ.

ಸಸಿಹಿತ್ಲು ಕದಿಕೆ ಲಚ್ಚಿಲ್ ನ ದೇವಿ ಅನುಗ್ರಹ ಹೆಸರಿನ ಬೋಟ್ ಅವಘಡಕ್ಕೆ ಈಡಾಗಿದ್ದು ದೋಣಿಯಲ್ಲಿದ್ದ ಸುಮಾರು ಎರಡು ಟನ್ ಮೀನು ಸಮುದ್ರಪಾಲಾಗಿದೆ.

ದೋಣಿಯು ಅಲೆಗಳ ರಭಸಕ್ಕೆ ಸಿಲುಕಿ ಮುಕ್ಕಾಲು ಭಾಗ ಮುಳುಗುವ ಹಂತಕ್ಕೆ ತಲುಪಿತ್ತು.

ಮರಳದಿಬ್ಬಕ್ಕೆ ಸಿಲುಕಿದ ದೋಣಿಯಲ್ಲಿದ್ದ ಮೀನುಗಾರರು ಇತರ ದೋಣಿಯ ಸಿಬ್ಬಂದಿಗಳ ಸಹಾಯದಿಂದ ಭಾರಿ ಪ್ರಯಾಸದಿಂದ ದೋಣಿಯನ್ನು ದಡ ಸೇರಿಸಿದರು.

ಈ ಮಧ್ಯೆ ರಜಾದಿನದ ಮೋಜಿಗಾಗಿ ಬಂದಿದ್ದ ಪ್ರವಾಸಿಗರು ಸಮುದ್ರದಲ್ಲಿ ತೇಲಿ ಬರುತ್ತಿದ್ದ ಭಾರಿ ಪ್ರಮಾಣದ ಮೀನುಗಳನ್ನು ಕೈಯಲ್ಲಿ ಹಿಡಿದು ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

02/10/2020 08:45 pm

Cinque Terre

37.91 K

Cinque Terre

0

ಸಂಬಂಧಿತ ಸುದ್ದಿ