ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಿಆರ್ ಝಡ್ ಅಲ್ಲದ ವ್ಯಾಪ್ತಿಯಲ್ಲಿ ಮರಳುಗಾರಿಕೆ ಬಗ್ಗೆ ಸಚಿವರ ಜೊತೆ ಶಾಸಕರ ಸಭೆ

ಉಡುಪಿ: ಕರ್ನಾಟಕದ ಕರಾವಳಿ ಭಾಗದ ಬಹು ವರ್ಷಗಳ ಬೇಡಿಕೆಯಾದ ಕರಾವಳಿ ನಿಯಂತ್ರಣವಲ್ಲದ ವಲಯ(non CRZ)ದಲ್ಲಿ ಸಾಂಪ್ರದಾಯಿಕ ಮಾನವಾಧಾರಿತ ಮುಳುಗಿ ಮರಳು ತೆಗೆಯುವ ಪದ್ಧತಿಗೆ ಅವಕಾಶ ಕಲ್ಪಿಸುವ ಬಗ್ಗೆ ಶಾಸಕರಾದ ಕೆ ರಘುಪತಿ ಭಟ್ ಅವರು ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಹಾಲಪ್ಪ ಬಸಪ್ಪ ಆಚಾರ್ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದರು.

ಕರಾವಳಿ ನಿಯಂತ್ರಣ ವಲ್ಲದ ವಲಯ(NON CRZ)ದಲ್ಲಿ ಸಾಂಪ್ರದಾಯಿಕ ಮಾನವಾಧಾರಿತ ಮುಳುಗಿ ಮರಳು ತೆಗೆಯಲು ಅವಕಾಶ ಕಲ್ಪಿಸಲು ಬೇಡಿಕೆ ಇರುವುದರಿಂದ ಮರಳು ನೀತಿಗೆ ತಿದ್ದುಪಡಿ ತಂದು ಅವಕಾಶ ಕಲ್ಪಿಸುವ ಬಗ್ಗೆ ಚರ್ಚಿಸಿದರು.ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕರಾದ ರಮೇಶ್, ಉಪ ನಿರ್ದೇಶಕರಾದ ಲಕ್ಷ್ಮಮ್ಮ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

23/09/2022 02:36 pm

Cinque Terre

998

Cinque Terre

0

ಸಂಬಂಧಿತ ಸುದ್ದಿ