ಕಾರ್ಕಳ: ಪುರಸಭಾ ವ್ಯಾಪ್ತಿಯ ಮೂರು ಮಾರ್ಗದಿಂದ ಹೋಟೆಲ್ ಕಾಮಧೇನು ವರೆಗಿನ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ಇದರ ಪರಿಣಾಮವಾಗಿ ರಸ್ತೆಯಲ್ಲಿ ಬೃಹತ್ ಹೊಂಡ ಗುಂಡಿಗಳು ಬಿದ್ದಿವೆ.
ಇದರಿಂದ ಅನೇಕ ಅಪಘಾತಗಳಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ಎಷ್ಟೇ ಮನವಿ ಸಲ್ಲಿಸಿದರೂ ಪ್ರಯೋಜವಾಗಲಿಲ್ಲ. ಅದ್ದರಿಂದ ಈ ರಸ್ತೆಯ ಶೀಘ್ರ ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕರು ದಿನಾಂಕ 17:9:22 ಶನಿವಾರ ಬೆಳಿಗ್ಗೆ 10:00 ಕ್ಕೆ ಕಾರ್ಕಳ ಬಸ್ಸು ನಿಲ್ದಾಣದಿಂದ ಮೆರವಣಿಗೆಯಲ್ಲಿ ಹೊರಟು ಮೂರು ಮಾರ್ಗವಾಗಿ ಕಾಮಧೇನು ಹೋಟೆಲ್ ವರೆಗೆ ತೆರಳಿ ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಬೇಕಾಗಿ ಅಯೋಜಕರಾದ ಪುರಸಭಾ ಸದಸ್ಯ ಶುಭದರಾವ್ ಮನವಿ ಮಾಡಿದ್ದಾರೆ.
Kshetra Samachara
16/09/2022 08:34 pm