ಮಣಿಪಾಲ: ಜೀವನದಲ್ಲಿ ಜಿಗುಪ್ಪೆಗೊಂಡು ಆಟೋ ಚಾಲಕರೊಬ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಣಿಪಾಲ ಸಮೀಪದ ಹೆರ್ಗ ಗ್ರಾಮದ ನರಸಿಂಗೆ ದೇವಸ್ಥಾನದ ಬಳಿ ಸಂಭವಿಸಿದೆ.
ಹೆರ್ಗ ಗ್ರಾಮದ ನಿವಾಸಿ ರಾಧಕೃಷ್ಣ ( 53) ಆತ್ಮಹತ್ಯೆ ಮಾಡಿಕೊಂಡಿರುವ ಆಟೋ ಚಾಲಕರಾಗಿದ್ದಾರೆ. ಇವರು ತಮ್ಮ ಮನೆಯ ಕೋಣೆಯ ಪಕ್ಕಾಸಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಣಿಪಾಲ ಪೋಲಿಸರು ಮಹಜರು, ಕಾನೂನು ಪ್ರಕ್ರಿಯೆ ನಡೆಸಿದರು. ಶವವನ್ನು ಮಣಿಪಾಲ ಆಸ್ಪತ್ರೆಯ ಶವಗಾರಕ್ಕೆ ವೈದ್ಯಕೀಯ ಪರೀಕ್ಷೆಗೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಇಲಾಖೆಗೆ ನೆರವಾದರು.
Kshetra Samachara
12/09/2022 07:14 pm