ಉಡುಪಿ: ಅಸಹಾಯಕ ಸ್ಥಿತಿಯಲ್ಲಿದ್ದ ತಾಯಿ ಮಗಳನ್ನು ರಕ್ಷಿಸಿ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ದಾಖಲಿಸಿದ್ದಾರೆ.
ಹೌದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೇರೆ ಊರಿನಿಂದ ಬಂದ ತಾಯಿ ಮತ್ತು ಮಗಳು ರಾತ್ರಿ ಹೊತ್ತು ದಾರಿ ತಪ್ಪಿ ಅಸಹಾಯಕ ಸ್ಥಿತಿಯಲ್ಲಿದ್ದರು. ಇದನ್ನು ಅರಿತ ವಿಶು ಶೆಟ್ಟಿ ಅಂಬಲಪಾಡಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಅವರ ಸಹಾಯದಿಂದ ತಾಯಿ- ಮಗಳನ್ನು ರಕ್ಷಿಸಿ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ದಾಖಲಿಸಿದ್ದಾರೆ.
ಬಾಲಕಿಯ ಬಗ್ಗೆ ಮಕ್ಕಳ ರಕ್ಷಣಾ ಇಲಾಖೆಯವರು ಸರಿಯಾದ ತನಿಖೆ ನಡೆಸಿ ಮುಂದಿನ ದಿನಗಳಲ್ಲಿ ಸೂಕ್ತ ರಕ್ಷಣೆಯ ಬಗ್ಗೆ ವ್ಯವಸ್ಥೆ ಕಲ್ಪಿಸಬೇಕಾಗಿ ಇಲಾಖೆಯವರಲ್ಲಿ ವಿಶು ಶೆಟ್ಟಿ ವಿನಂತಿಸಿದ್ದಾರೆ.
Kshetra Samachara
16/02/2021 11:15 pm