ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಚ್ಚಿಲ: ಧಾರ್ಮಿಕ ಧುರೀಣ, ಕಾಂಗ್ರೆಸ್ ಮುಖಂಡ ಪಣಿಯೂರು ಎ.ಕೆ.ಸುಲೈಮಾನ್ ನಿಧನ

ಉಚ್ಚಿಲ: ಸಾಮಾಜಿಕ, ಧಾರ್ಮಿಕ ಧುರೀಣ, ಕಾಂಗ್ರೆಸ್ ಮುಖಂಡ ಪಣಿಯೂರು ಎ.ಕೆ.ಸುಲೈಮಾನ್ (72) ಅಲ್ಪಕಾಲದ ಅನಾರೋಗ್ಯದಿಂದಾಗಿ ಇಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಉಡುಪಿಯ ಉಚ್ಚಿಲ ಸಮೀಪದ ಪಣಿಯೂರು ನಿವಾಸಿಯಾಗಿದ್ದ ಎ.ಕೆ.ಸುಲೈಮಾನ್, ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಉಡುಪಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾಗಿದ್ದ ಅವರು, ಎರ್ಮಾಳ್ ಜುಮಾ ಮಸ್ಜಿದ್ ಅಧ್ಯಕ್ಷರಾಗಿ, ಅಲ್ ರಿಯಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.ಮೃತರು ಪತ್ನಿ, ಮೂವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಮೃತದೇಹವನ್ನು ಸಂಜೆ ವೇಳೆಗೆ ಪಣಿಯೂರಿನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಗುವುದು. ಅಂತ್ಯಸಂಸ್ಕಾರ ಎರ್ಮಾಳ್ ಜುಮಾ ಮಸೀದಿಯ‌ ವಠಾರದಲ್ಲಿ ನೆರವೇರಲಿದೆ.

Edited By : Nirmala Aralikatti
Kshetra Samachara

Kshetra Samachara

13/02/2021 02:29 pm

Cinque Terre

3.62 K

Cinque Terre

0

ಸಂಬಂಧಿತ ಸುದ್ದಿ