ಉಡುಪಿ ಶಾಸಕ ಕೆ ರಘುಪತಿ ಭಟ್ ಅವರ ಸಹೋದರ ಸಾಂಗ್ಲಿಯ ಹೋಟೆಲ್ ಉದ್ಯಮಿ ಕೆ ರವೀಂದ್ರ ಬಾರಿತ್ತಾಯ( 60 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಬುಧವಾರ (10/2/2021) ನಸುಕಿನ ಮುಂಜಾನೆ ಸಾಂಗ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು
ಮೃತರು ತಾಯಿ , ಮೂವರು ಸಹೋದರರು , ಪತ್ನಿ , ಇಬ್ಬರು ಪುತ್ರಿಯರು ಓರ್ವ ಪುತ್ರನನ್ನು ಅಗಲಿದ್ದಾರೆ .ಶ್ರೀಯುತರು ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಸಂದರ್ಭ ವಿಶೇಷ ಸೇವೆ ಸಲ್ಲಿಸಿದ್ದರು .
ರವೀಂದ್ರ ಬಾರಿತ್ತಾಯರ ನಿಧನಕ್ಕೆ ಕರಂಬಳ್ಳಿ ವೇಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ , ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ , ಕರಂಬಳ್ಳಿ ಫ್ರೆಂಡ್ಸ್, ವೇಂಕಟರಮಣ ಭಜನಾ ಮಂಡಳಿಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ .
Kshetra Samachara
10/02/2021 10:31 am