ಹೆಬ್ರಿ: ಪಡುಕುಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಮುಂದಿನ ಐದು ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷರಾದ ಹಿರಿಯ ಸಹಕಾರಿ ಧುರೀಣ ಪಡುಕುಡೂರು ಜಗದೀಶ ಹೆಗ್ಡೆ ಮತ್ತು ಉಪಾಧ್ಯಕ್ಷರಾಗಿ ಅಶೋಕ್ ಎಂ.ಶೆಟ್ಟಿ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಡುಪಿ ಸಹಕಾರ ಇಲಾಖೆಯ ಉಪ ನಿಬಂಧಕರ ಕಚೇರಿಯ ಜ್ಯೋತಿ ಡಿ. ಚುನಾವಣೆ ಅಧಿಕಾರಿಯಾಗಿ ಭಾಗವಹಿಸಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ನಿರ್ದೇಶಕ ಮಂಡಳಿಯವರು ಅಭಿನಂದಿಸಿದರು.
ನಿರ್ದೇಶಕರಾದ ಹೃದಯ ಕುಮಾರ್ ಶೆಟ್ಟಿ, ರವೀಂದ್ರ ಶೆಟ್ಟಿ, ಶ್ರೀಧರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಸುಕೇಶ್ ಶೆಟ್ಟಿ, ದಿವಾಕರ ಶೆಟ್ಟಿ, ಸುಮತಿ ಪೂಜಾರಿ, ಸುಕನ್ಯಾ, ಸುರೇಶ ಪೂಜಾರಿ, ಸಂತೋಷ ನಾಯ್ಕ್, ಸಂಘದ ಕಾರ್ಯದರ್ಶಿ ಶಾರದಾಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
28/01/2021 01:36 pm