ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸರಕಾರಿ ಕಾಲೇಜಿನ ಟಾಪರ್ ಗಾಯತ್ರಿಗೆ ಹೃದ್ರೋಗ ತಜ್ಞೆಯಾಗುವಾಸೆ !

ಜಿಲ್ಲೆಯಲ್ಲಿ ಈ ಬಾರಿ ಎಸೆಸೆಲ್ಸಿಯಲ್ಲಿ ಐವರು ಟಾಪರ್ ಗಳಾಗಿ ಮೂಡಿ ಬಂದಿದ್ದಾರೆ. ಉಡುಪಿಯ ಸರಕಾರಿ ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಗಾಯತ್ರಿ, 625 ಅಂಕ ಪಡೆದು ಟಾಪರ್ ಗಳ ಸಾಲಿಗೆ ಸೇರಿದ್ದಾಳೆ.

625 ಅಂಕ ಬರಬಹುದು ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಆದರೆ ನನಗೆ ಒಂದು ಕನಸು ಇತ್ತು. ನಾನುಬೆಳಗ್ಗೆ 5 ಗಂಟೆಗೆ ಎದ್ದು ಓದುತ್ತಿದ್ದೆ. ರಾತ್ರಿ 7 ಗಂಟೆಯ ನಂತರ ಓದಲು ಆರಂಭಿಸುತ್ತಿದ್ದೆ ನನಗೆ ಕಲಿಸಿದ ಶಿಕ್ಷಕರು ತುಂಬಾ ಸಹಾಯ ಮಾಡಿದರು ನಮ್ಮದು ಸರ್ಕಾರಿ ಶಾಲೆಯಾದರೂ ಅತ್ಯುತ್ತಮ ಶಿಕ್ಷಣ ನೀಡಿದ್ದಾರೆ. ನನ್ನ ಶಾಲೆ ಎಂದರೆ ನನಗೆ ಹೆಮ್ಮೆ ಕಾರ್ಡಿಯಾಲಜಿಸ್ಟ್ ಆಗಬೇಕೆಂಬ ಆಸೆ ನನಗಿದೆ.

ವಿಜ್ಞಾನ ವಿಭಾಗದ ಪಿಸಿಎಂಬಿ ಕಲಿಯುತ್ತೇನೆ. ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ ಹಾಗಾಗಿ ನಾನು ಹೃದ್ರೋಗ ತಜ್ಞೆಯಾಗಿ ಉತ್ತಮ ಸೇವೆ ನೀಡಬೇಕು ಎಂಬುದು ನನ್ನ ಆಸೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Edited By :
PublicNext

PublicNext

19/05/2022 04:32 pm

Cinque Terre

37.19 K

Cinque Terre

3

ಸಂಬಂಧಿತ ಸುದ್ದಿ