ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಲಾಡ್ಜ್ ನಲ್ಲಿ ಮತ್ತೊಂದು ಆತ್ಮಹತ್ಯೆ ನಡೆದಿದೆ.
ಮಂಗಳೂರು ಮೂಲದ ಮೆಡಿಕಲ್ ರೆಪ್ ಒಬ್ಬರು ಇಲ್ಲಿನ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶರಣ್(33) ಆತ್ಮಹತ್ಯೆಗೆ ಶರಣಾದ ಯುವಕ.
ಶರಣ್ ,ಇಲ್ಲಿನ ರೂಮ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಗೆ ಶರಣಾಗಿದ್ದು , ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿದ್ದಾರೆ.ಎರಡು ದಿನದ ಹಿಂದಷ್ಟೇ ಲಾಡ್ಜ್ ನ ಹೆಸರನ್ನು ಮಾಲೀಕರು ಬದಲಾಯಿಸಿದ್ದರು.ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಹೆಸರು ಬದಲಾಯಿಸಲಾಗಿತ್ತು.
ಲಾಡ್ಜ್ ದ್ವಾರದ ದಿಕ್ಕು ಬದಲಾಯಿಸಲು ಕೂಡ ಯೋಜಿಸಲಾಗಿತ್ತು.ಆದರೆ ಈ ಲಾಡ್ಜ್ ಈಗ ಸುಸೈಡ್ ಸ್ಪಾಟ್ ಆಗಿ ಮಾರ್ಪಾಡಾಗುತ್ತಿದೆ.
PublicNext
19/04/2022 12:31 pm