ಉಡುಪಿ: ಉಡುಪಿಯ ಪೇಜಾವರ ಶ್ರೀಗಳಿಗೆ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆಯೊಡ್ಡಿದ ದುಷ್ಕರ್ಮಿಯ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭೀಮ್ ಆರ್ಮಿ ಸಂಘಟನೆಯ ಮತಿನ್ ಕುಮಾರ್ ಬಿಜಾಪುರ ಉಡುಪಿಯ ಪೇಜಾವರ ಅಧೋಕ್ಷಜ ಪೀಠದ ಶ್ರೀ ವಿಶ್ವ ಪ್ರಸನ್ನ ತೀರ್ಥರಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ದೂರಲಾಗಿದೆ. ಮಾತನಾಡುವ ವೇಳೆ ಪೇಜಾವರ ಶ್ರೀಗಳಿಗೆ ಅವಾಚ್ಯವಾಗಿ ಏಕವಚನದಲ್ಲಿ ನಿಂದಿಸಿದ್ದಾನೆ. ಸುಮ್ಮನೆ ಕೂತರೆ ಸರಿ, ಮುಂದೆ ಏನಾದರೂ ನಾಟಕ ಮಾಡಿದರೆ ಎರಡನೇ ಭೀಮ ಕೋರೆಗಂವ್ ಯುದ್ಧ ಅಲ್ಲೇ ಉಡುಪಿ ಮಠದ ಮುಂದೆ ಆಗುತ್ತೆ.
ಒಂದಲ್ಲ ಒಂದು ಸಲ ಯುದ್ಧ ಆಗುತ್ತದೆ. ಎರಡು ಸಮುದಾಯಗಳ ನಡುವೆ ಹಿಂಸಾಚಾರವನ್ನು ಪ್ರಚೋದಿಸಿ ಮತ್ತು ಪೇಜಾವರ ಶ್ರೀಗಳಿಗೆ ಜೀವ ಬೆದರಿಕೆಯನ್ನು ಒಡ್ಡಿದ್ದಾನೆ ಎಂದು ದೂರಲಾಗಿದೆ.ಪೇಜಾವರ ಶ್ರೀಗಳನ್ನು ಏಕವಚನದಲ್ಲಿ ಅವಾಚ್ಯವಾಗಿ ನಿಂದಿಸಿ ಧರ್ಮದ ನಿಂದನೆಯನ್ನು ಮಾಡಿದ್ದನ್ನು ಹಿಂದೂ ಜಾಗರಣ ವೇದಿಕೆ ಖಂಡಿಸಿದ್ದು ದೂರು ದಾಖಲಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ BNS 2023 U/s-362,351(2),353(2),296 ಅನ್ವಯ ಪ್ರಕರಣ ದಾಖಲಾಗಿದೆ.
PublicNext
14/12/2024 12:44 pm