ಪರ್ಕಳ: ಪರ್ಕಳದ ಹೃದಯಭಾಗದಲ್ಲಿರುವ ಮೆಡಿಕಲ್ ಶಾಪ್ ಮಾಲಕ ವಾಮನ ನಾಯಕ್ ಉಡುಪಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.
ಅಪಘಾತದಲ್ಲಿ ಅವರ ತಲೆಗೆ ತೀವ್ರತರದ ಏಟು ಬಿದ್ದಿದ್ದು ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು.ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
ಅಪಘಾತಕ್ಕೆ ಕಾರಣವಾದ ವಾಹನ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದು ಇದೊಂದು ಹಿಟ್ ಅಂಡ್ ರನ್ ಕೇಸ್ ಇರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಮೃತರು ಉತ್ತಮ ಭಜನೆ, ಭಕ್ತಿಗೀತೆ, ಹಾಗೂ ಸಂಗೀತದ ಪರಿಕರಗಳನ್ನು ನುಡಿಸುತ್ತಿದ್ದರು.ಉಡುಪಿಯ ಸುತ್ತಮುತ್ತ ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಡುಗಾರಿಕೆಯ ಮೂಲಕ ಜನಮನ್ನಣೆ ಗಳಿಸಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಪರ್ಕಳದ ಮೋಹನ್ ದಾಸ್ ನಾಯಕ್ ,ಗಣೇಶ್ ರಾಜ್ ಸರಳೇಬೆಟ್ಟು ತೀವ್ರಸಂತಾಪ ವ್ಯಕ್ತಪಡಿಸಿದ್ದಾರೆ.
Kshetra Samachara
25/03/2022 04:32 pm