ಕುಂದಾಪುರ: ಚಿನ್ನಾಭರಣ ಕದ್ದು ಸೊಸೈಟಿಯಲ್ಲಿ ಅಡವಿಟ್ಟಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಹೊನ್ನಾವರ ತಾಲೂಕಿ ಮಂಕಿ ನಿವಾಸಿ ವಿಲ್ಸನ್ ಪಿಯಾದಾಸ್ ಲೋಪಿಸ್ (29) ಹಾಗೂ ತೆಕ್ಕಟ್ಟೆ ನಿವಾಸಿ ಗಂಗಾಧರ (40) ಬಂಧಿತರು. ಆರೋಪಿಗಳು ಕುಂದಾಪುರ ತಾಲೂಕಿ ಕಾವ್ರಾಡಿ ಮುಳ್ಳುಗಡ್ಡೆ, ಬಸ್ರೂರು ಹಾಗೂ ಕುಂದಾಪುರ ರೈಲ್ವೆ ನಿಲ್ದಾಣದ ವಸತಿ ಗೃಹದ ಮನೆಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ವಿಲ್ಸನ್ ಕದ್ದ ಚಿನ್ನಾಭರಣಗಳನ್ನು ಗಂಗಾಧರಗೆ ನೀಡುತ್ತಿದ್ದ. ಬಳಿಕ ಗಂಗಾಧರ ಅವುಗಳನ್ನು ಕೋಟೇಶ್ವರ ಮತ್ತು ಕುಂದಾಪುರ ಸೊಸೈಟಿಗಳಲ್ಲಿ ಅಡವು ಇಟ್ಟು ಹಣ ಪಡೆದುಕೊಂಡು ಇಬ್ಬರೂ ಹಂಚಿಕೊಳ್ಳುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ಆರೋಪಿಗಳಿಂದ ಪೊಲೀಸರು 64.760 ಗ್ರಾಂ ಚಿನ್ನಾಭರಣ ಹಾಗೂ 112 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ.
Kshetra Samachara
05/10/2020 04:30 pm