ಕಾಪು: ಹಳೆ ದ್ವೇಷದಿಂದ ವ್ಯಕ್ತಿಯ ಮೇಲೆ ಬೈಕ್ ನಲ್ಲಿ ಬಂದ ತಂಡವೊಂದು ಕೊಲೆ ಯತ್ನ ನಡೆಸಿದ ಘಟನೆ ಪಡುಬಿದ್ರಿ ಸಮೀಪದ ಪಾದೆಬೆಟ್ಟುವಿನಲ್ಲಿ ಭಾನುವಾರ ರಾತ್ರಿ ನಡೆದಿದೆ.
ಘಟನೆಯಲ್ಲಿ ಕೃಷ್ಣಾಪುರ ಫಾರೂಕ್ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಪಾದೆಬೆಟ್ಟು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದ್ವಾರದ ಬಳಿ ಇರುವ ಟೈಲರಿಂಗ್ ಅಂಗಡಿಯ ಪಕ್ಕದಲ್ಲಿ ರಾತ್ರಿ 9 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ಕೃಷ್ಣಾಪುರ ಫಾರೂಕ್ ಅಂಗಡಿಯ ಬಳಿ ನಿಂತಿರುವ ಸಮಯ ಆರೋಪಿಗಳಾದ ಅಶ್ಫಾನ್, ಆರೀಫ್, ರಿಯಾಜ್ ಎಂಬವರು ಬೈಕ್ ನಲ್ಲಿ ಬಂದು ಫಾರೂಕ್ ರನ್ನು ಹಿಂಬಾಲಿಸಿಕೊಂಡು ಅಂಗಡಿಯ ಒಳಗೆ ನುಗ್ಗಿದ್ದಾರೆ. ಬಳಿಕ ಫಾರೂಕ್ ಗೆ ಚೂರಿಯಿಂದ ಇರಿದು, ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದ್ದಾರೆ. ತಡೆಯಲು ಪ್ರಯತ್ನಿಸಿದ ಟೈಲರ್ ಅಂಗಡಿಯ ರಾಜು ತುಕಾರಾಮ್ ದೇವಾಡಿಗರ ಮೇಲೂ ಹಲ್ಲೆ ನಡೆಸಿ ಅಂಗಡಿಯಲ್ಲಿದ್ದ ಸೊತ್ತುಗಳಿಗೆ ಹಾನಿಯನ್ನುಂಟು ಮಾಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಫಾರೂಕ್ ಗೆ ಹಾಗೂ ತಂಡದ ಮಧ್ಯೆ ಹಳೆ ವೈಷಮ್ಯದಿಂದ ಹಲ್ಲೆ ನಡೆದಿರುವ ಬಗ್ಗೆ ಶಂಕಿಸಲಾಗಿದೆ.
Kshetra Samachara
30/11/2020 07:10 pm