ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಹೆಬ್ರಿ : ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘವು 2021- 22ನೇ ಸಾಲಿನಲ್ಲಿ ಒಟ್ಟು 315.06 ಕೋಟಿ ವ್ಯವಹಾರ ನಡೆಸಿ ರೂ 1.15 ಕೋಟಿ ನಿವ್ವಳ ಲಾಭ ಗಳಿಸಿದೆ. ಗ್ರಾಹಕ ಸದಸ್ಯರಿಗೆ ಅತ್ಯುತ್ತಮ ಸೇವೆಯನ್ನು ಸಂಘವು ನೀಡುತ್ತಿದೆ. ವಿನೂತನ ಪ್ರಯೋಗವಾಗಿ ರೈತರಿಗೆ ಕಡಿಮೆ ದರದಲ್ಲಿ ಬಾಡಿಗೆ ಟ್ರ್ಯಾಕ್ಟರ್ ವ್ಯವಸ್ಥೆಯನ್ನು ಸಂಘವು ಮಾಡಿದ್ದು ಇದರಿಂದ ರೈತರಿಗೆ ಅನುಕೂಲವಾಗಿದೆ. ಸಂಘದ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳು ಎಂದು ಸಂಘದ ಅಧ್ಯಕ್ಷ ನವೀನ್ ಕೆ ಅಡ್ಯಂತಾಯ ಹೇಳಿದರು .

ಅವರು ಹೆಬ್ರಿಯ ಅನಂತಪದ್ಮನಾಭ ಸನ್ನಿಧಿಯಲ್ಲಿ ಶನಿವಾರ ನಡೆದ ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಂಘದ ಹಿರಿಯ ರೈತ ಸದಸ್ಯರನ್ನು ಗೌರವಿಸಲಾಯಿತು, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೀನ ನಾಯ್ಕ್ ವಾರ್ಷಿಕ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಎಚ್ ರಾಜೀವ ಶೆಟ್ಟಿ , ಎಚ್. ಕೆ ಶ್ರೀಧರ ಶೆಟ್ಟಿ , ಎಚ್. ಕೆ ನಾರಾಯಣ ನಾಯ್ಕ್, ಎಚ್. ವಿ ಹೆಗಡೆ, ಪಾಂಡುರಂಗ ಪೂಜಾರಿ, ಕೆರೆಬೆಟ್ಟು ರತ್ನಾಕರ ಶೆಟ್ಟಿ ಸೇರಿದಂತೆ ಹಲವರು ವಿವಿಧ ಸಮಸ್ಯೆಗಳನ್ನು ಆಡಳಿತ ಮಂಡಳಿಯ ಗಮನಕ್ಕೆ ತಂದರು.

ಸಂಘದ ಉಪಾಧ್ಯಕ್ಷ ಪುಟ್ಟಣ್ಣ ಭಟ್, ನಿರ್ದೇಶಕರಾದ ಕರುಣಾಕರ ಶೆಟ್ಟಿ, ಸುಧಾಕರ್ ಹೆಗ್ಡೆ, ಭೋಜ ಪೂಜಾರಿ, ಬಸವ ನಾಯ್ಕ್, ವಸಂತ ನಾಯ್ಕ್, ಅಮೃತ್ ಕುಮಾರ್ ಶೆಟ್ಟಿ, ಗಣೇಶ್ ಕುಮಾರ್, ಸುಮಿತ್ರ ಹೆಗ್ಡೆ, ಸುಧಾ ಗಣೇಶ್ ನಾಯಕ್, ಸುರೇಶ್ ಭಂಡಾರಿ ಮೊದಲಾದವರು ಉಪಸ್ಥಿರಿದ್ದರು.

Edited By : PublicNext Desk
Kshetra Samachara

Kshetra Samachara

13/09/2022 02:17 pm

Cinque Terre

792

Cinque Terre

0

ಸಂಬಂಧಿತ ಸುದ್ದಿ