ಕಾರ್ಕಳ : ನೀರಿನಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ಅಜೆಕಾರು ಠಾಣಾ ವ್ಯಾಪ್ತಿಯ ಕೆರ್ವಾಶೆ ಬಳಿ ನಡೆದಿದೆ.
ಕಿರಣ್ (21) ಮೃತಪಟ್ಟ ಯುವಕ ಐದು ಮಂದಿ ಗೆಳೆಯರ ತಂಡ ಸಮೀಪದ ಫಾಲ್ಸ್ ಗೆ ಭೇಟಿ ನೀಡಿದ್ದು, ಸ್ನಾನ ಮಾಡುತ್ತಿದ್ದ ಸಂದರ್ಭ ಇನ್ನೊಂದು ಬದಿಗೆ ಹೋದ ಕಿರಣ್ ತುಂಬಾ ಹೊತ್ತಾದರೂ ಮರಳಿಲ್ಲ. ಇದನ್ನು ಗಮನಿಸಿದ ಯುವಕರ ತಂಡ ಸಾಕಷ್ಟು ಹುಡುಕಾಡಿದರೂ ಕಿರಣ್ ಪತ್ತೆಯಾಗಿಲ್ಲ.
ಆ ಬಳಿಕ ಸ್ಥಳೀಯರು ಯುವಕನ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಿದಾಗ ನೀರಿನಲ್ಲಿ ಶವ ಪತ್ತೆಯಾಗಿದೆ. ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
21/12/2020 02:53 pm