ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ : ಕಾರಿನ ಧಾವಾಂತಕ್ಕೆ ವೃದ್ಧ ಮಹಿಳೆ ಬಲಿ

ಉಳ್ಳಾಲ : ಇಲ್ಲಿನ ನೇತ್ರಾವತಿ ನದಿ ಸೇತುವೆ ಸಮೀಪದ ಆಡಂಕುದ್ರುವಿನ ಎಂಬಲ್ಲಿ ಕಾರೊಂದರ ಧಾವಾಂತಕ್ಕೆ ರಸ್ತೆ ದಾಟಲು ನಿಂತಿದ್ದ ವೃದ್ಧೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಸೇವಂತಿಗುಡ್ಡೆಯ ನಿವಾಸಿ ಕೃಷ್ಣಪ್ಪ ಅವರ ಪತ್ನಿ ಬೇಬಿ (65) ಮೃತಪಟ್ಟವರು.

ಆಡಂಕುದ್ರುವಿನಲ್ಲಿ ಅಂಗಡಿ ಹೊಂದಿದ್ದ ಬೇಬಿಯವರು, ಪಂಪ್‌ವೆಲ್‌ನಲ್ಲಿ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಸಂಜೆ ರಾತ್ರಿಪಾಳಿಯ ಕೆಲಸಕ್ಕೆ ತೆರಳಲು ರಸ್ತೆ ದಾಟುತ್ತಿದ್ದರು‌. ಈ ವೇಳೆ ತೊಕ್ಕೊಟ್ಟಿನಿಂದ ಮಂಗಳೂರು ಕಡೆಗೆ ಅತೀ ವೇಗದಿಂದ ಧಾವಿಸಿ ಬಂದ ಪೋಲೊ ಕಾರು ಇವರಿಗೆ ಢಿಕ್ಕಿ ಹೊಡೆದಿತ್ತು. ಬಳಿಕ ನಿಯಂತ್ರಣ ತಪ್ಪಿದ ಪೋಲೊ ಕಾರು ಹೆದ್ದಾರಿ ಅಂಚಿನ ಆಳವಾದ ಕಮರಿಗೆ ಉರುಳಿ ಬಿದ್ದಿದೆ.

ಈ ವೇಳೆ ಪೋಲೊ ಕಾರನ್ನು ಹಿಂದಿಕ್ಕುವ ಧಾವಂತದಲ್ಲಿದ್ದ ಕಿಯಾ ಕಾರು ಕೂಡ ರಸ್ತೆ ಬದಿಯ ಪೊದೆಗೆ ನುಗ್ಗಿದೆ. ಕಾರುಗಳ ಚಾಲಕರಿಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಾಗಿದೆ‌ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

10/12/2024 12:25 pm

Cinque Terre

2.86 K

Cinque Terre

0

ಸಂಬಂಧಿತ ಸುದ್ದಿ