ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ಯಾಡ್ಮಿಂಟನ್ ಆಟಗಾರಿಗೆ ಅಂಟಿದ ಸೋಂಕು: ಬ್ಯಾಂಕಾಕ್ ಆಸ್ಪತ್ರೆಗೆ ದಾಖಲು

ಹೈದರಾಬಾದ್ : ಬ್ಯಾಂಕಾಕ್ ಗೆ ಬಂದಿದ್ದ ಖ್ಯಾತ ಭಾರತೀಯ ಬ್ಯಾಡ್ಮಿಂಟನ್ ಪಟುಗಳಾದ ಸೈನಾ ನೆಹ್ವಾಲ್ ಮತ್ತು ಎಚ್.ಎಸ್ ಪ್ರಣೋಯ್ ರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ಬ್ಯಾಡ್ಮಿಂಟನ್ ಸರಣಿಗೆಂದು ಬಂದಿದ್ದ ಆಟಗಾರರಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ನಿಯಮ ಪ್ರಕಾರ ಬ್ಯಾಂಕಾಕ್ ನ ಆಸ್ಪತ್ರೆಯೊಂದರಲ್ಲಿ ಹತ್ತು ದಿನಗಳ ಕ್ವಾರಂಟೈನ್ ಮಾಡಲಾಗಿದೆ.

ಸೈನಾರನ್ನು ಈಗಾಗಲೇ ಪಂದ್ಯಾವಳಿಯಿಂದ ಕೈಬಿಡಲಾಗಿದ್ದು, ಜೊತೆಗೆ ಅವರ ಪತಿ ಪಾರುಪಳ್ಳಿ ಕಶ್ಯಪ್ ರನ್ನೂ ಪಂದ್ಯಾವಳಿಯಿಂದ ಹೊರಗಿಡಲಾಗಿದೆ ಎಂದು ವರದಿ ತಿಳಿಸಿದೆ.

ಕಶ್ಯಪ್ ರ ವರದಿಯು ಇನ್ನೂ ದೊರಕಲಿಲ್ಲವಾದರೂ ಸೈನಾ ನೆಹ್ವಾಲ್ ರ ಜೊತೆಗಿದ್ದ ಕಾರಣ ಅವರಿಗೂ ಸೋಂಕು ಹರಡಿರುವ ಸಾಧ್ಯತೆಗಳಿವೆ ಎಂದು ಟೂರ್ನಿಯಿಂದ ಹೊರಗಿಡಲಾಗಿದೆ.

ಸದ್ಯ ತಾಯ್ಲಾಂಡ್ ನ ನಿಯಮ ಪ್ರಕಾರ ಸೈನಾ ನೆಹ್ವಾಲ್ ಹಾಗೂ ಎಚ್.ಎಸ್ ಪ್ರಣೋಯ್ ಆಸ್ಪತ್ರೆಗೆ ದಾಖಲಾಗಿ 10 ದಿನಗಳ ಕ್ವಾರಂಟೈನ್ ಗೆ ಒಳಪಟ್ಟಿದ್ದಾರೆ.

Edited By : Nirmala Aralikatti
PublicNext

PublicNext

12/01/2021 12:35 pm

Cinque Terre

39.4 K

Cinque Terre

0

ಸಂಬಂಧಿತ ಸುದ್ದಿ