ವರದಿಗಳ ಪ್ರಕಾರ, ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಿಂದ ಗೈರುಹಾಜರಾಗಿರುವುದಕ್ಕೆ ಬಿಸಿಸಿಐ ಗರಂ ಆಗಿದ್ದು, ತನಿಖೆ ನಡೆಸಲು ಮುಂದಾಗಿದೆ ಎಂದು ವರದಿಯಾಗಿದೆ.
ಪ್ರತಿಯೊಬ್ಬರು ದೇಶೀ ಟೂರ್ನಿ ಆಡಬೇಕೆಂಬ ಕಡ್ಡಾಯ ನಿಯಮಿದ್ದರೂ ಸಂಜು ಏಕದಿನ ಟೂರ್ನಿಯಿಂದ ಹಿಂದೆ ಸರಿದಿದ್ದು, ಇದೀಗ ಅವರ ವಿರುದ್ಧ ಕ್ರಮಕ್ಕೆ ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ. ಇದರ ಪರಿಣಾಮವಾಗಿ ಸಂಜು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೆ ತಂಡದಲ್ಲಿ ಆಯ್ಕೆಯಾಗುವುದು ಅನುಮಾನ ಎನ್ನಲಾಗುತ್ತಿದೆ.
ಟೂರ್ನಮೆಂಟ್‌ಗೆ ಮುನ್ನ ನಡೆಯುವ ಪೂರ್ವಸಿದ್ಧತಾ ಶಿಬಿರಕ್ಕೆ ಸ್ಯಾಮ್ಸನ್ ಲಭ್ಯವಿರುವುದಿಲ್ಲ ಎಂದು ಹೇಳಿದ್ದರಿಂದ ಕೇರಳ ತಂಡ ಅವರನ್ನು ಆಯ್ಕೆ ಮಾಡಲಿಲ್ಲ. "ಆಯ್ಕೆದಾರರು ಸರಿಯಾದ ಕಾರಣವನ್ನು ಬಯಸುತ್ತಾರೆ. ಇಲ್ಲದಿದ್ದರೆ, ಅವರನ್ನು ಏಕದಿನ ಸರಣಿಗೆ ಪರಿಗಣಿಸುವುದು ಕಷ್ಟಕರವಾಗಿರುತ್ತದೆ" ಎಂದು ಮೂಲವೊಂದು ತಿಳಿಸಿದೆ.
PublicNext
18/01/2025 08:43 am