ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೆಟ್ರೊದಲ್ಲಿ ಜೀವಂತ ಹೃದಯ ಸಾಗಿಸಿ ದಾಖಲೆ ಬರೆದ ಧಾರವಾಡದ ವೈದ್ಯ

ಧಾರವಾಡ: ಅಪಘಾತದಲ್ಲಿ ಮೆದುಳು ನಿಷ್ಕ್ರೀಯಗೊಂಡಿದ್ದ ವ್ಯಕ್ತಿಯ ಜೀವಂತ ಹೃದಯವನ್ನು ಧಾರವಾಡ ಮೂಲದ ವೈದ್ಯರೊಬ್ಬರು 13 ಕಿಲೋ ಮೀಟರ್ ದೂರದ ಆಸ್ಪತ್ರೆಗೆ ಕೇವಲ 13 ನಿಮಿಷದಲ್ಲಿ ಕೊಂಡೊಯ್ದಿದ್ದಾರೆ. ಅದು ಕೂಡ ಹೃದಯವನ್ನು ಮೆಟ್ರೊದಲ್ಲಿ ರೈಲಿನಲ್ಲಿ ತೆಗೆದುಕೊಂಡು ಹೋಗಿರುವುದು ವಿಶೇಷ.

ಹೌದು! ಧಾರವಾಡ ಮೂಲದ ವೈದ್ಯರಾದ ಡಾ.ಅಜಯ್ ಜೋಶಿ ಅವರು ಹೈದರಾಬಾದ್‌ನ ಗ್ಲೇನ್ ಗೆಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಹೃದಯ ಮತ್ತು ಶ್ವಾಸಕೋಶ ಕಸಿ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಪತ್ನಿ ಕೂಡ ಹೈದರಾಬಾದ್‌ನಲ್ಲಿ ಸ್ತ್ರೀರೋಗ ತಜ್ಞೆಯಾಗಿ ಕೆಲಸ ಮಾಡುತ್ತಿದ್ದಾರೆ.

35 ವರ್ಷದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಮೆದುಳು ನಿಷ್ಕ್ರೀಯಗೊಂಡಿದ್ದರಿಂದ ಕುಟುಂಬಸ್ಥರು ಅವರ ಅಂಗಾಂಗ ದಾನ ಮಾಡಿದ್ದರು. ಡಾ.ಅಜಯ್ ಅವರು ಕರ್ತವ್ಯ ಹೈದರಾಬಾದ್‌ನ ಗ್ಲೇನ್ ಗೆಲ್ಸ್ ಗ್ಲೋಬಲ್ ಆಸ್ಪತ್ರೆಯ ರೋಗಿಯೊಬ್ಬರಿಗೆ ಹೃದಯದ ಅವಶ್ಯಕತೆ ಇತ್ತು. ಕೂಡಲೇ ಡಾ.ಅಜಯ್ ಅವರು ಕಾಮಿನೇನಿ ಆಸ್ಪತ್ರೆಯಿಂದ ತಮ್ಮ ಆಸ್ಪತ್ರೆಗೆ ಆ ಜೀವಂತ ಹೃದಯ ತೆಗೆದುಕೊಂಡು ಹೋಗುವ ಜವಾಬ್ದಾರಿ ಹೊತ್ತುಕೊಂಡು ಕೇವಲ 13 ನಿಮಿಷದಲ್ಲಿ ಹೈದರಾಬಾದ್‌ನಲ್ಲೇ ಇರುವ 13 ಕಿಲೋ ಮೀಟರ್ ದೂರದ ತಮ್ಮ ಆಸ್ಪತ್ರೆಗೆ ಹೃದಯವನ್ನು ತೆಗೆದುಕೊಂಡು ಹೋಗಿದ್ದಾರೆ. ಮೆಟ್ರೊ ಮಾರ್ಗದಲ್ಲಿ ಗ್ರೀನ್ ಕಾರಿಡಾರ್ ನಿರ್ವಹಿಸಿ ಮೆಟ್ರೊ ಮುಖಾಂತರವೇ ಹೃದಯವನ್ನು ತಮ್ಮ ಆಸ್ಪತ್ರೆಗೆ ಸಾಗಿಸಿದ್ದಾರೆ. ಆ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಮೆಟ್ರೊದಲ್ಲಿ ಹೃದಯ ಸಾಗಾಟ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಈ ಹೃದಯ ಸಾಗಾಟ ಮಾಡಿರುವ ವಿಷಯ ದೇಶಮಟ್ಟದಲ್ಲಿ ಗಮನಸೆಳೆದಿದೆ. ಹುಬ್ಬಳ್ಳಿ, ಧಾರವಾಡದಲ್ಲೇ ಶಿಕ್ಷಣ ಪೂರೈಸಿರುವ ಡಾ.ಅಜಯ್, ಯುಕೆಯಲ್ಲಿ ಶ್ವಾಸಕೋಶ ಮತ್ತು ಹೃದಯ ಕಸಿ ಚಿಕಿತ್ಸೆ ಕುರಿತು ಉನ್ನತ ಶಿಕ್ಷಣ ಪಡೆದಿದ್ದಾರೆ. ಡಾ.ಅಜಯ್ ಅವರ ಪಾಲಕರು ಹುಬ್ಬಳ್ಳಿಯ ನವನಗರದಲ್ಲೇ ವಾಸಿಸುತ್ತಿದ್ದಾರೆ.

Edited By : Vinayak Patil
PublicNext

PublicNext

19/01/2025 03:44 pm

Cinque Terre

39.78 K

Cinque Terre

14

ಸಂಬಂಧಿತ ಸುದ್ದಿ