ನವದೆಹಲಿ: 'ಕೋಟಿಗೊಬ್ಬ 3' ಸಿನಿಮಾದ ನಂತರ ಮತ್ತೊಮ್ಮೆ ಅಬ್ಬರಿಸೋದಕ್ಕೆ ಕಿಚ್ಚ ಸುದೀಪ ರೆಡಿಯಾಗಿದ್ದಾರೆ. ಅವರೀಗ 'ವಿಕ್ರಾಂತ್ ರೋಣ'ನಾಗಿ ನಿಮ್ಮ ಮುಂದೆ ಬರಲಿದ್ದಾರೆ. 'ಅಭಿನಯ ಚಕ್ರವರ್ತಿ'ಯ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ರೆಡಿಯಾಗಿದೆ. ಯುಗಾದಿ ಹಬ್ಬದ ಪ್ರಯುಕ್ತ ಕಿಚ್ಚನ ಅಭಿಮಾನಿಗಳಿಗೆ ಚಿತ್ರತಂಡ ಭರ್ಜರಿ ಗಿಫ್ಟ್ ನೀಡಿದೆ. ಇದೀಗ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಟೀಸರ್ ನೋಡಿ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೆಹ್ವಾಗ್, "ಬ್ಲಾಕ್ ಬಸ್ಟರ್ ಆ ರಹಾ ಹೈ. ವಾವ್.. ವಿಕ್ರಾಂತ್ ರೋಣಾ ವಾವ್.. ಎಲ್ಲರೂ ಸಿದ್ಧರಾಗಿ ಸುದೀಪ್ ಅವರ ಅದ್ಭುತ ವರ್ಚಸ್. ಜುಲೈ 28ರಂದು ವಿಶ್ವದಾದ್ಯಂತ 3ಡಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ' ಎಂದು ಹೇಳಿದ್ದಾರೆ.
PublicNext
03/04/2022 03:57 pm