ಯಶಸ್ವಿ ಜೈಸ್ವಾಲ್ ಸರಿಯಾದ ಸಮಯಕ್ಕೆ ಬಾರದ ಕಾರಣ ಟೀಂ ಇಂಡಿಯಾ ಬಸ್ ಬುಧವಾರ ಬೆಳಗ್ಗೆ ಅಡಿಲೇಡ್‌ನ ವಿಮಾನ ನಿಲ್ದಾಣಕ್ಕೆ ಹೋಟೆಲ್‌ನಿಂದ ಹೊರಟಿದೆ ಎಂದು ರೇ ಸ್ಪೋರ್ಟ್ಜ್ ವರದಿ ತಿಳಿಸಿದೆ.
ಭಾರತ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಬಸ್‌ಗೆ ಹತ್ತಿದರು ಮತ್ತು ಹೊರಡುವ ಮೊದಲು ಯಶಸ್ವಿನಿಗಾಗಿ ಸುಮಾರು 20 ನಿಮಿಷಗಳ ಕಾಲ ಕಾಯುತ್ತಿದ್ದರು. ಬಳಿಕ ಯಶಸ್ವಿ ಜೈಸ್ವಾಲ್ ಅವರನ್ನು ಬಿಟ್ಟು ಬಸ್ ಏರ್‌ಪೋರ್ಟ್‌ಗೆ ತೆರಳಿತು. ಇನ್ನು ಟೀಂ ಇಂಡಿಯಾದ ಭದ್ರತಾ ಅಧಿಕಾರಿ ಅಂಶುಮಾನ್ ಉಪಾಧ್ಯಾಯ ಅವರು ಯಶಸ್ವಿಯನ್ನು ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಕರೆದೊಯ್ದರು.
PublicNext
11/12/2024 03:29 pm