ಶಿರಾಳಕೊಪ್ಪ ಆಸುಪಾಸಿನ ಜನರು ಭಯಭೀತರಾಗಿದ್ದು, ಇಂದು ಮುಂಜಾನೆ ಒಮ್ಮೆಲೆ ಉಂಟಾದ ಶಬ್ದದಿಂದಾಗಿ ಜನರು ಬೆದರಿದ್ದರು. ಶಿರಾಳಕೊಪ್ಪದಿಂದ 3 ಕಿ.ಮೀ. ದೂರದಲ್ಲಿ ಭೂಕಂಪ ಆಗಿದೆಯೆಂದು ಹೇಳಲಾಗಿತ್ತು. ಅಲ್ಲದೇ, ಇದು 4.1 ತೀವ್ರತೆಯ ಭೂಕಂಪ, ಅದೃಷ್ಟವಶಾತ್ ಯಾವುದೇ ಸಾವು, ನೋವು ವರದಿಯಾಗಿಲ್ಲ. ಆದರೂ, ಶಿರಾಳಕೊಪ್ಪ ಜನರು ಹೆದರಿಕೊಂಡಿದ್ದಾರೆ ಎಂಬ ಆಂಶ ಹೊರಬಿದ್ದಿದೆ.
ಶಿರಾಳಕೊಪ್ಪ ಪಟ್ಟಣದ ಜನರಿಗೆ ಭೂಕಂಪನದ ಅನುಭವ ಆಗಿದ್ದೇ ತಡ. ಈ ಒಂದು ಪೋಸ್ಟ್ ಕೂಡ ಸಖತ್ ವೈರಲ್ ಆಗಿದ್ದು, ಇದರಲ್ಲಿ ಶಿಕಾರಿಪುರ, ಸಾಗರ ಸೇರಿದಂತೆ, ವಿವಿಧ ಭಾಗಗಳಲ್ಲಿ ಭೂಕಂಪನದ ಅನುಭವ ಆಗಿದೆ ಎಂದು ನಮೂದಾಗಿತ್ತು. ಆದ್ರೆ, ಅಸಲಿಯಾಗಿ, ಈ ಭಾಗದಲ್ಲಿ ಎಲ್ಲಿಯೂ ಭೂಕಂಪ ಆಗಿಯೇ ಇಲ್ಲ ಎಂಬ ಮಾಹಿತಿ ಕೂಡ ಹೊರಬಿದ್ದಿದೆ. ಈ ನಡುವೆ ಜಿಲ್ಲಾಡಳಿತ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ವರದಿ ತರಿಸಿಕೊಂಡಿದ್ದು, ಈ ವರದಿಯಲ್ಲಿ, ಎಲ್ಲಿಯೂ ಭೂಕಂಪನ ದಾಖಲಾಗಿಲ್ಲ ಎಂಬ ಸ್ಪಷ್ಟನೆ ನೀಡಿದೆ.
ಈ ವರದಿಯನ್ವಯ ಜಿಲ್ಲಾಧಿಕಾರಿಗಳು ಕೂಡ ಭೂಕಂಪನವಾಗಿಲ್ಲ. ಇದು ಭೂಕಂಪನವೇ ಅಥವಾ ಬೇರೆ ಕಾರಣದಿಂದಾಗಿ ಈ ಭಾರಿ ಶಬ್ಧ ಬಂದಿದೆ ಎಂಬುದರ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿ 3 ತಂಡ ರಚಿಸಿ, ವರದಿ ನೀಡಲು ಆದೇಶಿಸಿದ್ದಾರೆ.
ಒಟ್ಟಿನಲ್ಲಿ, ಶಿವಮೊಗ್ಗದ ಶಿರಾಳಕೊಪ್ಪದಲ್ಲಿ, ಒಂದು ವೇಳೆ ನಿಜವಾಗಿಯೂ ಭೂಕಂಪನವೇ ಆಗಿದ್ದರೆ, ತಜ್ಞರ ಪ್ರಕಾರ, ಭೂಮಿ ಅಥವಾ ಗೋಡೆಗಳು ಬಿರುಕು ಬಿಡಬೇಕಿತ್ತು. ಜೊತೆಗೆ ಹಾನಿ ಕೂಡ ಉಂಟಾಗಬೇಕಿತ್ತು. ಆದ್ರೆ ಇದ್ಯಾವುದೂ ಇಲ್ಲಿ ಆಗಿಲ್ಲ. ಆದರೂ, ಭಾರಿ ಶಬ್ಧ ಉಂಟಾಗಲು ಕಾರಣವೇನು !? ಜೊತೆಗೆ ವೈರಲ್ ಆದ ಪೋಸ್ಟ್ ನ ಹಿನ್ನೆಲೆ ಏನು ಎಂಬುದು ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.
PublicNext
06/10/2022 06:13 pm