ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಬೈಕ್ ರ‍್ಯಾಲಿ ನಡೆಸಿ, ಬಳಿಕ ಅವರ ವಿರುದ್ಧ ಆರೋಪ ಮಾಡಿದ್ದ ಪದ್ಮನಾಭ ಭಟ್ ವಿರುದ್ಧ ಇಂದು ಕುಮಾರ್ ಬಂಗಾರಪ್ಪ ಅಭಿಮಾನಿಗಳು ಮತ್ತು ಕಾರ್ಯಕರ್ತರು ಕಿಡಿ ಕಾರಿದ್ದಾರೆ.
ನಿನ್ನೆ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಕುಮಾರ್ ಅಭಿಮಾನಿಗಳು, ಬಂಗಾರಪ್ಪ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡುವ 84 ವಯಸ್ಸಿನ ಯಜಮಾನ ಎಂದು ಪದ್ಮನಾಭ ಭಟ್ ಅವರ ವಿರುದ್ಧ ಟೀಕಿಸಿದ್ದಾರೆ. ಇದು ಇವರಿಗೆ ಶೊಭೆ ತರುವಂತದ್ದಲ್ಲ ಎಂದು ಕಿಡಿ ಕಾರಿದ್ದಾರೆ. ಪದ್ಮನಾಭ ಭಟ್ ಮಧ್ಯರಾತ್ರಿ 12 ಗಂಟೆಗೆ ಎಸ್ ಕುಮಾರ್ ಬಂಗಾರಪ್ಪ ನವರ ಮನೆಗೆ ಹೋಗಲು ಇವನು ಅವರ ಮನೆಯ ಬಾತ್ ರೂಂ ತೊಳೆಯುವವನ ಎಂದು ಟೀಕೆ ಮಾಡಿದ್ದಾರೆ. ಪದ್ಮನಾಭ್ ಭಟ್ ವಿರುದ್ಧ ಎಂ.ಡಿ ಉಮೇಶ್ ಮತ್ತು ಕನಕದಾಸ್ ಕಲ್ಲಂಬಿ ಟೀಕೆ ಮಾಡಿದ್ದಾರೆ.
ಪದ್ಮನಾಭ ಭಟ್ ಅವನ ಮನೆನೇ ಅವನು ತೊಳೆದುಕೊಂಡಿಲ್ಲ. ಪದ್ಮನಾಭ ಭಟ್ ಅವನ ತಮ್ಮನಿಗೆ ಮೋಸ ಮಾಡಿದ್ದಾನೆ. ಈತ ಸನ್ಮಾನ್ಯ ಕುಮಾರ್ ಬಂಗಾರಪ್ಪ ಅವರ ಬಗ್ಗೆ ಏನು ಮಾತಾಡೋದು....? ಸೊರಬದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ಯಡಿಯೂರಪ್ಪ ಅವರೊಂದಿಗೆ ಸೇರಿ ಶಾಸಕ ಕುಮಾರ್ ಬಂಗಾರಪ್ಪ ಅನೇಕ ಯೋಜನೆಗಳನ್ನು ತಾಲೂಕಿಗೆ ನೀಡಿದ್ದಾರೆ. ಇದಕ್ಕಾಗಿ ಈ ಯಜಮಾನನಿಗೆ ಹೊಟ್ಟೆ ಉರಿಯಾಗಿದೆ ಎಂದು ಆರೋಪ ಮಾಡಿದ್ದಾರೆ. ಸೊರಬ ತಾಲ್ಲೂಕಿನಲ್ಲಿರುವ ನಮೋ ವೇದಿಕೆ ಒಂದು ಕಳ್ಳರ ಗುಂಪಾಗಿದೆ ಎಂದು ನಮೋ ವೇದಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ನಿನ್ನೆ ಕುಮಾರ್ ಬಂಗಾರಪ್ಪ ವಿರುದ್ಧ ನೀಡಿದ ಪದ್ಮನಾಭ ಭಟ್ ಹೇಳಿಕೆಗೆ, ಕುಮಾರ್ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಮಾತಿನ ಚಾಟಿ ಬೀಸಿದ್ದಾರೆ.
PublicNext
19/09/2022 10:25 am