ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಆರ್‌ಎಸ್‌-25 ಎಂಜಿನ್‌ ತಾಪಮಾನದ ಸಮಸ್ಯೆ: ಮೂನ್ ರಾಕೆಟ್‌ ಹಾರಾಟ ಕ್ಯಾನ್ಸಲ್

ಫ್ಲೋರಿಡಾ: ನಾಲ್ಕು ಆರ್‌ಎಸ್‌-25 ಎಂಜಿನ್‌ಗಳಲ್ಲಿ ಒಂದರ ತಾಪಮಾನದ ಸಮಸ್ಯೆಯಿಂದಾಗಿ ನಾಸಾ ತನ್ನ ದೈತ್ಯ ಮೂನ್ ರಾಕೆಟ್‌ನ ಪರೀಕ್ಷಾ ಹಾರಾಟವನ್ನ ಸೋಮವಾರ ರದ್ದುಗೊಳಿಸಿದೆ. ಅಂತಿಮವಾಗಿ ಮಂಗಳ ಗ್ರಹಕ್ಕೆ ಹೋಗುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಭಾಗವಾಗಿ ಚಂದ್ರನ ಸುತ್ತಲೂ ಕ್ರೆವ್ ಮಾಡದ ಹಾರಾಟವಾದ ಆರ್ಟೆಮಿಸ್ 1 ಮಿಷನ್ ಪ್ರಾರಂಭಿಸಲು ಪರ್ಯಾಯ ದಿನಾಂಕಗಳಾದ ಸೆಪ್ಟೆಂಬರ್ 2 ಮತ್ತು ಸೆಪ್ಟೆಂಬರ್ 5 ಆಯ್ದುಕೊಂಡಿದೆ.

ವಿಜ್ಞಾನಿಗಳು ರಾಕೇಟ್‌ನ ಕೆಲವು ಭಾಗಗಳಲ್ಲಿ ಬಿರುಕುಗಳನ್ನ ಕಂಡುಕೊಂಡಿದ್ದು, ಇಂದು ಸಂಜೆ 6.03ಕ್ಕೆ ನಡೆಯಬೇಕಿದ್ದ ರಾಕೆಟ್ ಉಡಾವಣೆ ರದ್ದುಗೊಂಡಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಅತಿದೊಡ್ಡ ರಾಕೆಟ್ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದ ಉಡಾವಣಾ ಪ್ಯಾಡ್ 39 ಬಿನಲ್ಲಿ ನೆಲೆಗೊಂಡಿದೆ. ಆಗಸ್ಟ್ 29, 2022ರಂದು ಸಂಜೆ 6.30 ರಿಂದ ರಾತ್ರಿ 8.30 ರ ನಡುವೆ ಆರ್ಟೆಮಿಸ್ 1 ಮಿಷನ್ನ ಉಡಾವಣಾ ವಿಂಡೋ ಇತ್ತು. ನಾವು ಸಣ್ಣ ಇಂಧನ ಸೋರಿಕೆಯೊಂದಿಗೆ ಹೆಣಗಾಡುತ್ತಿದ್ದೇವೆ ಎಂದು ನಾಸಾ ಸೋಮವಾರ ಬೆಳಿಗ್ಗೆ ಹೇಳಿದೆ. ಆದ್ರೆ, ಈ ಸಣ್ಣ ಸಮಸ್ಯೆಯು ಈ ಕಾರ್ಯಾಚರಣೆಯನ್ನ ಎಷ್ಟು ವಿಳಂಬಗೊಳಿಸಬಹುದು ಎಂದು ಹೇಳಿರಲಿಲ್ಲ.

Edited By : Nagaraj Tulugeri
PublicNext

PublicNext

29/08/2022 10:51 pm

Cinque Terre

103.27 K

Cinque Terre

0

ಸಂಬಂಧಿತ ಸುದ್ದಿ