ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸ್‌ಟಿ ಸಮುದಾಯಕ್ಕೆ ಅವಮಾನವಾದ್ರೆ ರಾಜೀನಾಮೆಗೆ ಸಿದ್ಧ: ಶ್ರೀರಾಮುಲು

ವಿಜಯನಗರ: ಎಸ್‌ಟಿ ಮೀಸಲಾತಿಗಾಗಿ ಸ್ವಾಮೀಜಿಗಳು ಧರಣಿ ನಡೆಸುತ್ತಿದ್ದಾರೆ. ನಮ್ಮ ಸರ್ಕಾರ ಕೊಟ್ಟ ಮಾತು, ಹೇಳಿದಂತೆ ನಡೆದುಕೊಳ್ಳಲು ಬದ್ಧವಾಗಿದೆ. ಒಂದು ವೇಳೆ ಎಸ್‌ಟಿ ಸಮುದಾಯಕ್ಕೆ ಅವಮಾನವಾದ್ರೆ ನಾನು ರಾಜೀನಾಮೆ ನೀಡೋದಕ್ಕೂ ಸಿದ್ಧವಾಗಿರೋದಾಗಿ ಸಚಿವ ಬಿ. ಶ್ರೀರಾಮುಲು ಘೋಷಣೆ ಮಾಡಿದ್ದಾರೆ.

ಇಂದು ವಿಜಯನಗರದ ಕೊಡ್ಲಿಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮೀಸಲಾತಿ ವಿಚಾರವನ್ನು ಇತ್ಯರ್ಥಪಡಿಸಲು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಕ್ಟೋಬರ್ 8ರಂದು ಸಭೆ ಕರೆದಿದೆ ಎಂದರು.

ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು ಸಭೆಯಲ್ಲಿ ಮೀಸಲಾತಿ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ, ಮೀಸಲಾತಿ ವಿಚಾರದಲ್ಲಿ ನಮ್ಮ ಸರ್ಕಾರ ಬದ್ದವಾಗಿದೆ. ಕೊಟ್ಟ ಮಾತನ್ನು ಸರ್ಕಾರ ಉಳಿಸಿಕೊಳ್ಳಲಿದೆ. ಎಸ್ ಟಿ ಮೀಸಲಾತಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಹೇಳಿದರು.

ಎಸ್‌ಟಿ ಮೀಸಲಾತಿ ಹೆಚ್ಚಿಸುವಂತೆ ಸ್ವಾಮೀಜಿ ಧರಣಿ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಬಂದರೆ ಮೀಸಲಾತಿ ಕೊಡಿಸುವುದಾಗಿ ಮಾತು ನೀಡಿದ್ದೆ, ಎಸ್ ಟಿ ಸಮುದಾಯಕ್ಕೆ ಅವಮಾನವಾದರೆ ನಾನು ರಾಜೀನಾಮೆ ಕೊಡಲು ಸಿದ್ದನಿದ್ದೇನೆ, ಮೀಸಲಾತಿ ವಿಚಾರದಲ್ಲಿ ಕೊಟ್ಟ ಮಾತನ್ನು ನಾವು ತಪ್ಪೋದಿಲ್ಲ ಎಂದು ತಿಳಿಸಿದರು.

Edited By : Nagaraj Tulugeri
PublicNext

PublicNext

26/09/2022 04:32 pm

Cinque Terre

28.37 K

Cinque Terre

3

ಸಂಬಂಧಿತ ಸುದ್ದಿ