ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಪಿ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಬೇಜವಾಬ್ದಾರಿತನ : ವಿಡಿಯೋ ವೈರಲ್

ನವದೆಹಲಿ : ಉತ್ತರ ಪ್ರದೇಶ ವಿಧಾನಸಭೆಯೊಳಗೆ ಬಿಜೆಪಿ ಶಾಸಕರಿಬ್ಬರಲ್ಲಿ ಒಬ್ಬರು ವಿಡಿಯೋ ಗೇಮ್ ಆಡುತ್ತಿರುವುದು ಮತ್ತೊಬ್ಬರು ತಂಬಾಕು ಜಗಿಯುತ್ತಿರುವ ವಿಡಿಯೋಗಳನ್ನು ಸಮಾಜವಾದಿ ಪಕ್ಷ (ಎಸ್ ಪಿ) ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ.

ಹೌದು ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಹೋಬಾದ ಬಿಜೆಪಿ ಶಾಸಕ ರಾಕೇಶ್ ಗೋಸ್ವಾಮಿ ಮೊಬೈಲ್ ನಲ್ಲಿ ಕಾರ್ಡ್ ಆಡುತ್ತಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ಬಿಜೆಪಿಯ ಝಾನ್ಸಿ ಶಾಸಕ ರವಿ ಶರ್ಮಾ ಅವರು ತಂಬಾಕು ಜಗಿಯುತ್ತಿರುವುದನ್ನು ಕಾಣಬಹುದು.

ಸದ್ಯ ಈ ವಿಡಿಯೋಗಳ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಎಸ್ ಪಿ, ಈ ಶಾಸಕರು ವಿಧಾನಸಭೆಯ ಘನತೆಯನ್ನು ಹಾಳು ಮಾಡುತ್ತಿದ್ದಾರೆ ಮತ್ತು ಅದನ್ನು ಮನರಂಜನಾ ಕೇಂದ್ರವನ್ನಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಒಟ್ಟಾರೆಯಲ್ಲಿ ವೈರಲ್ ಆದ ವಿಡಿಯೋ ಬಿಜೆಪಿಗೆ ತೀವ್ರ ಮುಖಭಂಗ ತಂದಿರುವುದಂತೂ ಸುಳ್ಳಲ್ಲ.

Edited By : Nirmala Aralikatti
PublicNext

PublicNext

24/09/2022 08:40 pm

Cinque Terre

111.73 K

Cinque Terre

10

ಸಂಬಂಧಿತ ಸುದ್ದಿ