ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಶೀಘ್ರವೇ ಬಂದರುಗಳ ಅಭಿವೃದ್ಧಿ ಕಾಮಗಾರಿ ಆರಂಭ; ಸಚಿವ ಅಂಗಾರ

ಕಾರವಾರ: ಕರಾವಳಿಯ ವಿವಿಧ ಬಂದರುಗಳ ಅಭಿವೃದ್ಧಿಗಾಗಿ ಕಾಮಗಾರಿ ಮಂಜೂರಾಗಿದ್ದು, ಶೀಘ್ರದಲ್ಲಿ ಕಾರ್ಯ ಪ್ರಾರಂಭವಾಗಲಿದೆ ಎಂದು ರಾಜ್ಯ ಮೀನುಗಾರಿಕೆ ಸಚಿವ ಎಸ್.ಅಂಗಾರ ಹೇಳಿದ್ದಾರೆ.

ಅವರು ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಇಲ್ಲಿನ ತದಡಿ ಬಂದರು ಅಭಿವೃದ್ಧಿ ಕಾರ್ಯವು ನಡೆಯಲಿದೆ. ಈಗಾಗಲೇ ಮೀನುಗಾರಿಕೆ ಇಲಾಖೆಗೆ ಸಂಬಂಧಪಟ್ಟ ಬಂದರುಗಳಲ್ಲಿ ಹೂಳು ತುಂಬುವುದು, ಮೀನುಗಾರಿಕೆಗೆ ಬೋಟ್ ತೆರಳುವ ಸ್ಥಳದಲ್ಲಿ ತೊಂದರೆಯಾಗುವುದನ್ನ ಗುರುತಿಸಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕೆಲಸ ಪ್ರಾರಂಭಿಸಲಾಗುತ್ತದೆ ಎಂದರು.

ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದಾಗ ಕರಾವಳಿ ಅಭಿವೃದ್ಧಿಗೆ ಕೇಂದ್ರದಿಂದ 3,000 ಕೋಟಿ ರೂಪಾಯಿ ಹಣಕಾಸಿನ ನೆರವು ನೀಡುವುದಾಗಿ ಘೋಷಿಸಿದ್ದು, ಅದರಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಮೀನುಗಾರರಿಗೆ ಮತ್ತು ಮೀನುಗಾರಿಕೆಗೆ ಸಹಾಯ, ಸಹಕಾರ ನೀಡುವುದಾಗಿ ತಿಳಿಸಿದರು.

ತದಡಿ ಸೇರಿದಂತೆ ಈ ಭಾಗದ ವಿವಿಧೆಡೆಯ ಮೀನುಗಾರಿಕೆ, ಕಡಲು ಕೊರೆತ ಮತ್ತಿತರ ಸಮಸ್ಯೆ ಬಗ್ಗೆ ವರದಿ ಪಡೆದು ಪರಿಹರಿಸಲಾಗುವುದು ಎಂದು ತಿಳಿಸಿದರು.

Edited By : Manjunath H D
PublicNext

PublicNext

08/09/2022 12:55 pm

Cinque Terre

37.02 K

Cinque Terre

0

ಸಂಬಂಧಿತ ಸುದ್ದಿ