ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಸಾಹಿತಿ ಬರಗೂರು ರಾಮಚಂದ್ರಪ್ಪ ವಿರುದ್ಧ ಗಂಗಾಮತ ಸಮಾಜದಿಂದ ಪ್ರತಿಭಟನೆ

ತುಮಕೂರು: ಗಂಗಾಮತ ಬೆಸ್ತರ ಕುಲದೇವತೆಯಾದ ಗಂಗಾಮಾತೆಯನ್ನು ಕೇಳಲಾಗದ ಭಾಷೆಯಲ್ಲಿ ಬರೆದು ಅವಮಾನ ಮಾಡಿರುವುದು ಸಮಾಜಕ್ಕೆ ನೋವನ್ನು ಉಂಟುಮಾಡಿದೆ ಎಂದು ಅವರ 'ಭರತ ನಗರಿ' ಕಾದಂಬರಿಯನ್ನು ಮತ್ತು ಮುದ್ರಿಸಿರುವ ಪ್ರತಿಗಳನ್ನು ಸರ್ಕಾರ ಮುಟ್ಟುಗೋಲು ಮಾಡಲು ಒತ್ತಾಯಿಸಿ ತುಮಕೂರು ಟೌನ್ ಹಾಲ್‌ನಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ಮೆರವಣಿಗೆ ಮೂಲಕ ಬಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಲ್ಲೂರು ಗಂಗಾಮತ ಕ್ಷೇಮಾಭಿವೃದ್ಧಿ ಅಧ್ಯಕ್ಷರಾದ ಕೆ. ಟಿ ಸೋಮಶೇಖರ್ ಮಾತನಾಡಿ ಬರಗೂರು ರಾಮಚಂದ್ರಪ್ಪನವರು ನಮ್ಮ ತುಮಕೂರು ಜಿಲ್ಲೆಯ ಕೀರ್ತಿಯನ್ನೂ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾಗಿ ಸ್ಥಾನ ಮಾನ ಪಡೆದ ವ್ಯಕ್ತಿ ಇವರ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಆದ್ರೆ

ಇವರು ಬರೆದ 'ಭರತ ನಗರಿ' ಕಾದಂಬರಿಯಲ್ಲಿ ಗಂಗೆಯನ್ನು ಅವಮಾನಿಸಿರುವುದನ್ನು ಖಂಡಿಸುತ್ತೇವೆ ವಿರೋಧಿಸುತ್ತೇವೆ ಬರಗೂರು ರಾಮಚಂದ್ರಪ್ಪ ನವರ ಬಗ್ಗೆ ಅಪಾರ ಗೌರವವಿದೆ ಎಂದರು. ಮುಖಂಡರಾದ ದಿವಾಕರ್ ರವರು ಮಾತನಾಡಿ ಬರಗೂರು ತಮ್ಮ ಕಾದಂಬರಿಯಲ್ಲಿ ಗಂಗೆಯನ್ನು ಹಾದರದ ಗಂಗೆ ಎಂದು ಮೂಲವನ್ನು ತಿರುಚಿ ಬರೆದಿದ್ದಾರೆ

ಹೀಗೆ ಮೂಲವನ್ನು ತಿರುಚಿ ಬರೆದಿರುವುದು ತಪ್ಪು, ಸರ್ಕಾರವನ್ನು ಈ ಮುದ್ರಿಸಿದ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

Edited By : Manjunath H D
PublicNext

PublicNext

07/09/2022 02:45 pm

Cinque Terre

27.2 K

Cinque Terre

0

ಸಂಬಂಧಿತ ಸುದ್ದಿ