ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಕಾಂಗ್ರೆಸ್ ಪಕ್ಷವೇ ಪಿಎಸ್ಐ ಹಗರಣದ ರೂವಾರಿ: ಪಿ ರಾಜೀವ್ ಗಂಭೀರ ಆರೋಪ

ಚಿಕ್ಕೋಡಿ: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಸಹ ಅವರೆಲ್ಲರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಲಿದೆ ಎಂದು ಕುಡಚಿ ಶಾಸಕ ಹಾಗೂ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ಸರ್ಕಾರದ ತನಿಖೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಕನಕಗಿರಿ ಶಾಸಕರ ಆಡಿಯೋ ವೈರಲ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಂಪೂರ್ಣ ಹಗರಣದ ಕುರಿತು ತನಿಖೆ ಕೈಗೊಂಡಿದ್ದಲ್ಲದೆ ಹಲವು ಆರೋಪಿಗಳನ್ನು ಬಂಧಿಸುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಅಲ್ಲದೆ ಹಿಂದಿನ ಸರ್ಕಾರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಮಾಡಿದ ಅವರು 2014/15ರಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯಲ್ಲಿ ನಡೆದಿದ್ದ ಹಗರಣದ ತನಿಖೆ ಮಾಡಲು ಆಗಿನ ಸರ್ಕಾರ ಮುಂದಾಗದ ಪರಿಣಾಮವೇ ಈಗ ಮತ್ತೇ ರಾಜ್ಯದಲ್ಲಿ ಅದೇ ರೀತಿಯ ಅಕ್ರಮಗಳು ನಡೆಯುತ್ತಿವೆ ಎನ್ನುವ ಮೂಲಕ ಕೈ ನಾಯಕರೆ ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ರೂವಾರಿಗಳೆಂದು ತಮ್ಮ ಪಕ್ಷದ ಮೇಲಿನ ವಿಪಕ್ಷಗಳ ಆರೋಪವನ್ನು ತಳ್ಳಿಹಾಕಿದರು.

ಅಲ್ಲದೆ ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಅಕ್ರಮ ನೇಮಕಾತಿಯ ಕುರಿತು ಕೊಪ್ಪಳ ಕನಕಗಿರಿ ಶಾಸಕ ಬಸವರಾಜ ದಡೇಸಗೂರ ನಡೆಸಿದ್ದಾರೆನ್ನಲಾದ ಹಣದ ವ್ಯವಹಾರದ ಆಡಿಯೋ ತುಣುಕುಗಳ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು ಆಡಿಯೋದ ನಿಖರತೆ ಅರಿಯದೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಜಾರಿಕೊಂಡರು.

Edited By :
PublicNext

PublicNext

06/09/2022 09:12 am

Cinque Terre

45.88 K

Cinque Terre

4

ಸಂಬಂಧಿತ ಸುದ್ದಿ