ಕೋಲಾರ: ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿಯಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಗಿಯಾಗಿ ಮಾಧ್ಯಮದೊಂದಿಗೆ ಮಾತನಾಡಿದರು.
ಮಂತ್ರಾಲಯದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ಸಿಎಂ ಬದಲಾವಣೆ ಬಗ್ಗೆ ಅವರ ಪಕ್ಷದಲ್ಲೇ ಮಾತುಕತೆ ನಡೆಯುತ್ತಿದೆ. ಬಿಜೆಪಿಯವರು ನಮಗೆ ಏನೂ ಹೇಳಬೇಕಾಗಿಲ್ಲ. ಮಂತ್ರಿಗಳು, ಶಾಸಕರು, ಮಾಜಿ ಶಾಸಕರು ಬದಲಾವಣೆ ಈ ಬಗ್ಗೆ ಚರ್ಚೆ ಮಾಡ್ತಿದ್ದಾರೆ ಎಂದರು.
ಬಿಹಾರ ರಾಜಕೀಯ ಬೆಳವಣಿಗೆ ಕುರಿತು ಮಾತನಾಡಿದ ಡಿಕೆಶಿ, ಕರ್ನಾಟಕದಲ್ಲೂ ಈ ರೀತಿ ಆಗಬಹುದು ಎಂದು ಭವಿಷ್ಯ ನುಡಿದರು. ಇನ್ನು, ಆಗಸ್ಟ್ 15 ರಂದು ಒಂದು ಲಕ್ಷ ಜನರೊಂದಿಗೆ ರಾಷ್ಟ್ರ ಧ್ವಜ ಹಿಡಿದು ಹೆಜ್ಜೆ ಹಾಕುತ್ತೇವೆ. ಬೆಂಗಳೂರಿನಲ್ಲಿ ಪಕ್ಷಾತೀತವಾಗಿ ಹೆಜ್ಜೆ ಹಾಕುತ್ತೇವೆ. ಅಂದು ಎಲ್ಲರೂ ಮೆಟ್ರೋ ಬಳಕೆ ಮಾಡಿ ಎಂದು ಮನವಿ ಮಾಡುತ್ತೇನೆ ಎಂದರು.
ಇನ್ನು ಯಡಿಯೂರಪ್ಪನವರು ನನಗೇನು ಹೇಳಬೇಕಾದದ್ದು ಇಲ್ಲ. ಈಗ ಸಿಎಂ ಬದಲಾವಣೆ ಕುರಿತು ಮಾತನಾಡಿದ್ದು ಅವರ ಪಕ್ಷದ ಸಚಿವರು, ಶಾಸಕರು, ಮಾಜಿ ಶಾಸಕರು. ಯಡಿಯೂರಪ್ಪ ಅವರು ನನ್ನ ಮೇಲೆ ಗೊಂದಲ ಸೃಷ್ಠಿ ಮಾಡೋದಲ್ಲ. ಸಿಎಂ ಬದಲಾವಣೆ ಕುರಿತು ತಮ್ಮ ಶಾಸಕ ಸಚಿವರಿಗೆ ಹೇಳಬೇಕು. ಬೆಂಕಿ ಹತ್ತದೆ ಹೊಗೆ ಆಡಲ್ಲ ಎಂದರು. ಇನ್ನು ಸಿಎಂ ಬದಲಾವಣೆ ಮಾಡ್ತಾರೋ ಬಿಡ್ತಾರೋ ಅನ್ನೋದು ಅವರ ಅವರ ಶಾಸಕರೇ ಮಾತಾಡ್ತಿದ್ದಾರೆ. ನಾನು ಮಂತ್ರಿ ಆಗ್ತಿನಿ ನಾನ್ ಸಿಎಂ ಆಗ್ತಿನಿ ಅಂತಾ ಗುಸುಗುಸು ಮಾತಾಡ್ಕೊಳ್ತಿದ್ದಾರೆ. ಇದನ್ನೇ ನಾವು ಚರ್ಚೆ ಮಾಡ್ತಿರೋದು ಎಂದು ಡಿಕೆ ಶಿವಕುಮಾರ್ ಹೇಳಿದ್ರು.
ವರದಿ: ರವಿ ಕುಮಾರ್, ಕೋಲಾರ
PublicNext
11/08/2022 05:52 pm