ವರದಿ- ಸಂತೋಷ ಬಡಕಂಬಿ.
ಬೆಳಗಾವಿ: ಕಬ್ಬು ಬೆಳೆಗಾರರ 2017-18 ನೇ ಸಾಲಿನ ಬಾಕಿ ಹಣ ಬಿಡುಗಡೆ ಮಾಡುವ ಸಲುವಾಗಿ ನಿರಂತರ ಹೋರಾಟವನ್ನು ಮಾಡಿದರೂ ಮಲಪ್ರಭಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸ್ಪಂದಿಸುತ್ತಿಲ್ಲ ಎಂದು ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದ್ದಗೌಡ ಮೋದಗಿ ಆರೋಪಿಸಿದರು.
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅಧಿಕಾರ ದುರುಪಯೋಗ, ಅಧ್ಯಕ್ಷರ ಅವ್ಯವಹಾರಗಳು ನಡೆದರೂ ಯಾರೂ ಗಮನಿಸುತ್ತಿಲ್ಲ. ಅಲ್ಲದೆ 4,400 ಸದಸ್ಯರದ್ದು 7 ಕೋಟಿ 80ಲಕ್ಷ ಹಣ ರೈತರ ಬಾಕಿ ಹಣವಿದೆ. ಕೇಂದ್ರ ಸರ್ಕಾರ ನಿಗದಿ ಪಡಿಸಿದಕ್ಕಿಂತ ಹೆಚ್ಚು ಸಕ್ಕರೆ ಮಾರಾಟ ಮಾಡಿದ್ದಾರೆ ಎಂದು ಕಾರ್ಖಾನೆಯ ವಿರುದ್ಧ ವಾಗ್ದಾಳಿ ನಡೆಸಿದರು.
ಕಾರ್ಖಾನೆಯ ಶೇರಿನ ಸದಸ್ಯರು ಹಾಗೂ ಕಬ್ಬು ಬೆಳೆಗಾರರ ಸಭೆಯನ್ನು 5-08- 2022ರಂದು ಇಟಗಿ ಕ್ರಾಸ್ ಹೊಸ ಕಾದ್ರೊಳ್ಳಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಇನ್ನೂ ಈ ಸಭೆಗೆ ಮಲಪ್ರಭಾ ಸಕ್ಕರೆ ಕಾರ್ಖಾನೆ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿಯನ್ನು ಸಿದ್ದಗೌಡ ಮೋದಗಿ ಮಾಡಿಕೊಂಡರು.
ಸಹಕಾರ ಸಚಿವರು ರೈತರಿಗೆ ತೊಂದರೆ ನೀಡಲು ಅಧಿಕಾರಿಗಳನ್ನು ಕಟ್ಟಿ ಹಾಕುವ ಕೆಲಸ ಮಾಡಿದ್ದಾರೆ ಎಂದು ಸಹಕಾರ ಸಚಿವರ ವಿರುದ್ಧ ಹರಿಹಾಯ್ದರು.
PublicNext
29/07/2022 04:18 pm