ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಅದಾನಿಗೋಸ್ಕರ ಒಂದು ದೇಶ ಒಂದು ಚುನಾವಣೆ ಮಸೂದೆ ತರುತ್ತಿದ್ದಾರೆ - ಸಚಿವ ಪ್ರೀಯಾಂಕ್ ಖರ್ಗೆ

ಬೆಳಗಾವಿ: ಒಂದು ದೇಶ ಒಂದು ಚುನಾವಣೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿರೋದಕ್ಕೆ ಸಚಿವ ಪ್ರೀಯಾಂಕ್ ಖರ್ಗೆ ಆಕ್ಷೇಪಿಸಿದ್ದಾರೆ. ಈ ಕುರಿತು ಬೆಳಗಾವಿಯ ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ವ್ಯತ್ಯಾಸಗಳ ಬಗ್ಗೆ ಚರ್ಚೆ ಮಾಡುವುದು ಆಸಕ್ತಿ ಇಲ್ಲ, ಅದಾನಿ ಪ್ರಕರಣದ ಬಗ್ಗೆ ಚರ್ಚೆ ಮಾಡಲು ಸಮಯವಿಲ್ಲ, ಮಣಿಪುರದ ಘಟನೆ ಬಗ್ಗೆ ಇವರಿಗೆ ಚರ್ಚೆ ಮಾಡಲು ಸಮಯವಿಲ್ಲ, ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿದೆ ಅದರ ಬಗ್ಗೆ ಚರ್ಚೆ ಮಾಡಲು ಸಿದ್ದರಿಲ್ಲ, ಜನರ ಗಮನ ಬೇರೆ ಕಡೆ ತರಲು ಇದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಒಂದು ಚುನಾವಣೆ ನಡಸಬೇಕಾದರೆ ತಂತ್ರಜ್ಞಾನಗಳು ಬೇಕು ಕೇಂದ್ರ ರಕ್ಷಣಾ ತಂಡಗಳು ಬೇಕು, ಯಾವ ರೀತಿ ಮಾಡ್ತಾರಂತೆ ನೀಲಿನಕ್ಷೆ ಹಾಕಿದ್ದಾರಾ..? ನೋಟು ಅಮಾನ್ಯೀಕರಣ ಮಧ್ಯರಾತ್ರಿ ಆಯಿತು ಪ್ರಧಾನ ಮಂತ್ರಿಗಳ ವೈಫಲ್ಯವನ್ನು ಮುಚ್ಚಿ ಹಾಕುವುದಕ್ಕೆ ತರ್ತಾಯಿದ್ದಾರೆ.ಪ್ರಾದೇಶಿಕ ಪಕ್ಷಗಳ ಅಭಿಪ್ರಾಯ ತಗೊಂಡಿದ್ದೀರಾ..? ಅದಾನಿ ಒಬ್ಬರಿಗೆ ಉಳಿಸಿವುದಕ್ಕೆ ಇದನ್ನು ತಂದಿದ್ದಾರೆ ಎಂದು ಕೇಂದ್ರದ ನಡೆಯ ವಿರುದ್ಧ ಸಚಿವ ಪ್ರೀಯಾಂಕ್ ಖರ್ಗೆ ಕಿಡಿ ಕಾರಿದರು.

Edited By : Suman K
PublicNext

PublicNext

13/12/2024 01:49 pm

Cinque Terre

39.78 K

Cinque Terre

19

ಸಂಬಂಧಿತ ಸುದ್ದಿ